ಆಚಾರ್ಯ ಚಾಣಕ್ಯರ ಪ್ರಕಾರ ಇಂತಹವರೇ ನಿಜವಾದ ಸ್ನೇಹಿತರು

Yashaswini V
Oct 16,2024

ಸ್ನೇಹಿತರು

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸ್ನೇಹಿತರು ಇದ್ದೇ ಇರುತ್ತಾರೆ.

ಒಳ್ಳೆಯ ಸ್ನೇಹಿತರು

ಕೆಲವರು ಒಳ್ಳೆಯವರೂ ಇರುತ್ತಾರೆ, ಇನ್ನೂ ಕೆಲವರು ಒಳ್ಳೆಯವರಂತೆ ನಟಿಸಿ ಮೋಸ ಮಾಡುವವರೂ ಇರುತ್ತಾರೆ. ಒಳ್ಳೆಯ ಸ್ನೇಹಿತರನ್ನು ಹುಡುಕುವುದು ಹೇಗೆ...

ನಿಜವಾದ ಸ್ನೇಹಿತರು

ನಮ್ಮವರೆಂದುಕೊಂಡವರೆಲ್ಲಾ ನಮ್ಮವರಲ್ಲ, ಬಿಟ್ಟು ಹೋದವರೆಲ್ಲಾ ಶತ್ರುಗಳಲ್ಲ... ಆಚಾರ್ಯ ಚಾಣಕ್ಯರ ಪ್ರಕಾರ, ನಿಜವಾದ ಸ್ನೇಹಿತರನ್ನು ಅವರ ಗುಣದಿಂದ ಪತ್ತೆ ಹಚ್ಚಬಹುದು.

ಆರೋಗ್ಯ ಸಮಸ್ಯೆ

ಆರೋಗ್ಯ ಸಮಸ್ಯೆಗಳಿದ್ದಾಗ ಯಾರು ಜೊತೆಗಿದ್ದು ಧೈರ್ಯ ತುಂಬುತ್ತಾರೋ ಅವರೇ ನಿಜವಾದ ಸ್ನೇಹಿತರು.

ಕಷ್ಟದ ಸಮಯ

ಜೀವನದಲ್ಲಿ ಕಷ್ಟ-ಸುಖಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟದಲ್ಲಿ ನಿಮ್ಮ ಜೊತೆಗೆ ನಿಲ್ಲುವವರೇ ನಿಜವಾದ ಮಿತ್ರರು.

ಶತ್ರುಗಳ ವಿರುದ್ಧ ನಿಲ್ಲುವುದು

ಕೇವಲ ಸುಖವಿದ್ದಾಗ ಜೊತೆಗಿದ್ದು ಶತ್ರುಗಳು ಎದುರುನಿಂತಾಗ ಓಡಿ ಹೋಗುವುದು ಸ್ನೇಹಿತರ ಗುಣವಲ್ಲ. ಶತ್ರುಗಳು ಎದುರಾದಾಗ ನಿಮ್ಮ ಪರವಾಗಿ ನಿಮ್ಮೊಂದಿಗೆ ಎದೆಯೊಡ್ಡಿ ನಿಲ್ಲುವವನೇ ನಿಜವಾದ ಸ್ನೇಹಿತ.

ದುಃಖದಲ್ಲಿ ಜೊತೆಗಿರುವುದು

ನಿಮ್ಮ ಪ್ರೀತಿಪಾತ್ರರು, ಕುಟುಂಬದವರು ಕಾಲವಾದಾಗ ನಿಮ್ಮ ಜೊತೆಗಿದ್ದು ಧೈರ್ಯ ತುಂಬುವವರೇ ನಿಜವಾದ ಆಪ್ತ ಸ್ನೇಹಿತರು.

VIEW ALL

Read Next Story