ಎರಡೇ ಬಾರಿ ಈ ಪೌಡರ್ ನ ಫೇಸ್ ಪ್ಯಾಕ್ ಬಳಸಿ ನೋಡಿ ಫಳ ಫಳನೆ ಹೊಳೆಯುವುದು ತ್ವಚೆ!

ಮೊಡವೆ, ಕಲೆಗಳ ಸಮಸ್ಯೆ

ಯಾವುದೇ ಅಡ್ಡ ಪರಿಣಾಮವಿಲ್ಲದೆ ಹೊಳೆಯುವ ಚರ್ಮವನ್ನು ಹೊಂದಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ.ಆದರೆ, ಬದಲಾಗುತ್ತಿರುವ ಲೈಫ್ ಸ್ಟೈಲ್ ನಿಂದಾಗಿ ಮೊಡವೆ, ಕಲೆಗಳಂತಹ ಸಮಸ್ಯೆಗಳು ಕಾಡುತ್ತಿವೆ.

ತ್ವಚೆಗಾಗಿ ಫೇಸ್ ಪ್ಯಾಕ್

ಈ ಎಲ್ಲಾ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಲು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸಬಹುದು.ಇದು ನಿಮ್ಮ ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಕೋಕೋ ಪೌಡರ್ ಲಾಭ

ಕೋಕೋ ಪೌಡರ್ ತ್ವಚೆಗೆ ಹೊಳಪು ನೀಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಕೋಕೋ ಪೌಡರ್ ನಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳುವುದರಿಂದ ಡೆಡ್ ಸೆಲ್ಸ್, ಮೊಡವೆಗಳಂತಹ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಕೋಕೋ ಪೌಡರ್ ಮತ್ತು ಮುಲ್ತಾನಿ ಮಿಟ್ಟಿ

ಒಂದು ಚಮಚ ಕೋಕೋ ಪೌಡರ್ ಮತ್ತು ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಮಿಶ್ರಣ ಮಾಡಿ. ನಂತರ ಅದಕ್ಕೆ 4 ರಿಂದ 5 ಹನಿ ರೋಸ್ ವಾಟರ್ ಸೇರಿಸಿ. ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಿಕೊಳ್ಳಿ.

ಕೋಕೋ ಪೌಡರ್ ಮತ್ತು ಚಕ್ಕೆ ಫೇಸ್ ಪ್ಯಾಕ್ :

ಮೃದುವಾದ ಚರ್ಮ ಬೇಕಾದರೆ ಕೋಕೋ ಪೌಡರ್ ಮತ್ತು ಚಕ್ಕೆ ಬೆರೆಸಿ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಬಹುದು. ಈ ಪ್ಯಾಕ್‌ಗೆ ಸ್ವಲ್ಪ ಜೇನುತುಪ್ಪವನ್ನೂ ಸೇರಿಸಬಹುದು. ಇದು ನಿಮ್ಮ ಚರ್ಮಕ್ಕೆ ಮೃದುತ್ವವನ್ನು ನೀಡುತ್ತದೆ.

ಕೋಕೋ ಪೌಡರ್ ಮತ್ತು ಅಲೋವೆರಾ ಜೆಲ್ ನ ಫೇಸ್ ಪ್ಯಾಕ್ :

ಸುಂದರ ತ್ವಚೆಗಾಗಿ ಮನೆಯಲ್ಲಿ ಒಂದು ಚಮಚ ಕೋಕೋ ಪೌಡರ್ ಮತ್ತು ಒಂದು ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ನೀರಿನಿಂದ ಮುಖ ತೊಳೆಯಿರಿ.

ಕೋಕೋ ಪೌಡರ್ ಮತ್ತು ಓಟ್ ಮೀಲ್ ನ ಫೇಸ್ ಪ್ಯಾಕ್ :

ಒಂದು ಟೀಚಮಚ ಕೋಕೋ ಪೌಡರ್ ನಲ್ಲಿ ಅರ್ಧ ಚಮಚ ಓಟ್ ಮೀಲ್ ನ್ನು ಮಿಶ್ರಣ ಮಾಡಿ. ನಂತರ ಸ್ವಲ್ಪ ಹಾಲಿನ ಕೆನೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖದ ಮೇಲೆ 30 ನಿಮಿಷಗಳ ಕಾಲ ಬಿಟ್ಟು ನಂತರ ಮುಖವನ್ನು ತೊಳೆಯಿರಿ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story