ಮಲಗುವ ಮುನ್ನ ಚಾಕೊಲೇಟ್ ತಿಂದರೇ ಬೇಗನೆ ನಿದ್ದೆ ಬರುವುದಿಲ್ಲ. ಇದರಲ್ಲಿನ ಸಣ್ಣ ಪ್ರಮಾಣದ ಕೆಫೇನ್ ಅಂಶಗಳು ನಿಮ್ಮ ಸುಖಕರ ನಿದ್ದಗೆ ಅಡ್ಡಿ ಉಂಟುಮಾಡುತ್ತವೆ.
ಮಲಗುವುದಕ್ಕಿಂತ ಎರಡರಿಂದ ಮೂರು ಗಂಟೆ ಮುನ್ನ ಹೆಚ್ಚು ಊಟ ಮಾಡುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಇದರಿಂದ ಬೇಗನೆ ನಿದ್ರೆ ಬರುವುದಿಲ್ಲ. ರಾತ್ರಿ ಮಲಗುವ ಮುನ್ನ ಜೀರ್ಣಕ್ರಿಯೆಗೆ ಸುಲುಭವಾಗವ ಆಹಾರ ತಿನ್ನಿ
ಮೊಟ್ಟೆ, ಪನ್ನೀರ್ನಂಥ ಹೆಚ್ಚು ಪ್ರೋಟಿನ್ಯುಕ್ತ ಆಹಾರಗಳು ಜೀರ್ಣಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತವೆ. ಮಲಗುವ ಮುನ್ನ ಈ ಪದಾರ್ಥಗಳ ಸೇವನೆ ನಿಯಂತ್ರಿಸಿ
ಮಲಗುವ ವೇಳೆ ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ರಾತ್ರಿ ವೇಳೆ ಹೆಚ್ಚು ಬಳಸುವುದರಿಂದ ಕಣ್ಣಿಗೆ ತೊಂದರೆಯಾಗಿ ನಿದ್ದೆ ಬೇಗನೆ ಬರುವುದಿಲ್ಲ.
ಮದ್ಯಪಾನ ಸೇವನೆಯಿಂದ ಬೇಗನೆ ನಿದ್ದೆ ಬರಬಹುದು. ಆದರೆ, ಒಟ್ಟಾರೆ ನಿದ್ದೆಯ ಗುಣಮಟ್ಟಕ್ಕೆ ಇದು ಅಡ್ಡಿಯಾಗುತ್ತದೆ.
ಅತಿಯಾಗಿ ಕರಿದ ಆಹಾರ ಸೇವಿಸುವುದರಿಂದ ನಿದ್ದೆ ಬೇಗನೆ ಬರುವುದಿಲ್ಲ. ಈ ಆಹಾರಗಳು ಆಸಿಡ್ ರಿಫ್ಲಕ್ಸ್ಗೆ ಕಾರಣವಾಗಿ, ನಿದ್ರೆಗೆ ಅಡ್ಡಿಯಾಗಬಹುದು.
ಹೆಚ್ಚು ಮಸಾಲೆಯುಕ್ತ ಆಹಾರವು ಅಜೀರ್ಣ ಮತ್ತು ಎದೆಯುರಿಗೆ ಕಾರಣವಾಗುತ್ತದೆ. ಹೀಗಾಗಿ ಖಾರವಾದ ಆಹಾರ ಜೀರ್ಣವಾಗಲು ಮಲಗುವ ಎರಡು ಗಂಟೆ ಮುನ್ನ ಸೇವಿಸಿ
ರಾತ್ರಿ ಮಲಗುವ ಮುನ್ನ ಕಾಫಿ ಕುಡಿದರೇ ನಿದ್ದೆ ಬೇಗನೆ ಬರುವುದಿಲ್ಲ. ಇದರಲ್ಲಿನ ಕೆಫೀನ್ ಅನ್ನು ಹೊರಹಾಕಲು ದೇಹಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಮಲಗುವುದಕ್ಕಿಂತ 6 ಗಂಟೆಗಳ ಒಳಗೆ ಕಾಫಿ ಕುಡಿಯಿರಿ.
ರಾತ್ರಿ ಮಲಗುವ ಮೊದಲು ಕಿತ್ತಳೆ, ದ್ರಾಕ್ಷಿ ಅಥವಾ ಇತರ ಸಿಟ್ರಸ್ ಹಣ್ಣುಗಳನ್ನು ತಿನ್ನುವುದು ಆಮ್ಲೀಯತೆ ಸೇರಿದಂತೆ ಅಜೀರ್ಣದ ಅನೇಕ ಸಮಸ್ಯೆ ಉಂಟು ಮಾಡುತ್ತದೆ. ನಿದ್ರೆಗೆ ಅಡ್ಡಿ ಉಂಟು ಮಾಡುತ್ತದೆ.