ಪಿಗ್ಮೆಂಟೇಶನ್ ನಿವಾರಣೆಗೆ ನೈಸರ್ಗಿಕ ಬ್ಲೀಚಿಂಗ್ ಆದ ನಿಂಬೆ ರಸ ಅತ್ಯುತ್ತಮ ಪರಿಹಾರ. ಇದಕ್ಕಾಗಿ ಪೀಡಿತ ಜಾಗಗಳಲ್ಲಿ ನಿಂಬೆ ರಸ ಹಚ್ಚಿ 10 ನಿಮಿಷಗಳ ಬಳಿಕ ಫೇಸ್ ವಾಶ್ಮಾಡಿ. ಬಳಿಕ ಸನ್‌ಸ್ಕ್ರೀನ್ ಬಳಸಿ.
ಅಲೋಯಿನ್ ಎಂಬ ಅಂಶವನ್ನು ಹೊಂದಿರುವ ಅಲೋವೆರಾ ಕೂಡ ಪಿಗ್ಮೆಂಟೇಶನ್‌ಗೆ ಅತ್ಯುತ್ತಮ ಮನೆಮದ್ದು.
ಅರಿಶಿನವು ಚರ್ಮವನ್ನು ಹಗುರಗೊಳಿಸುವ ಗುಣಗಳನ್ನು ಹೊಂದಿದ್ದು ಇದರೊಂದಿಗೆ ಜೇನುತುಪ್ಪ ಬೆರೆಸಿ ಪೀಡಿತ ಜಾಗದಲ್ಲಿ ಹಚ್ಚಿ 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡುವುದರಿಂದ ಪಿಗ್ಮೆಂಟೇಶನ್ ಸಮಸ್ಯೆ ಬಗೆಹರಿಯುತ್ತದೆ.
ಉತ್ಕರ್ಷಣ ನಿರೋಧಕಗಳಲ್ಲಿ ಹೇರಳವಾಗಿರುವ ಗ್ರೀನ್ ಟೀ ಸಾರವನ್ನು ಹತ್ತಿ ಉಂಡೆಯಿಂದ ಮುಖಕ್ಕೆ ಹಚ್ಚಿ ಅದು ಒಣಗಿದ ಬಳಿಕ ಫೇಸ್ ವಾಶ್ ಮಾಡಿದರೆ ಕೆಲವೇ ದಿನಗಳಲ್ಲಿ ಪಿಗ್ಮೆಂಟೇಶನ್ ಮಾಯವಾಗುತ್ತದೆ.
ಟೊಮಾಟೊ ರಸದಲ್ಲಿ ಲೈಕೋಪೀನ್ ಎಂಬ ಅಂಶವಿದ್ದು, ಇದು ಚರ್ಮವನ್ನು ಹಗುರಗೊಳಿಸಲು ಹಾಗೂ ಪಿಗ್ಮೆಂಟೇಶನ್ ನಿವಾರಿಸಲು ಪರಿಣಾಮಕಾರಿ ಮದ್ದು.
ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ, 10 ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದರಿಂದ ಪಿಗ್ಮೆಂಟೇಶನ್ ನಿವಾರಿಸಬಹುದು.
ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಇದು ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ. ಮೊಸರಿನ ಫೇಸ್ ಮಾಸ್ಕ್ ಬಳಕೆಯು ಪಿಗ್ಮೆಂಟೇಶನ್‌ನಿಂದ ಪರಿಹಾರ ನೀಡುತ್ತದೆ.
ಸೌತೆಕಾಯಿ ರಸವನ್ನು ಮುಖಕ್ಕೆ ಸವರುವುದರಿಂದ ಇದು ಹಿತವಾದ ಭಾವನೆಯನ್ನು ನೀಡುವುದರ ಜೊತೆಗೆ ಪಿಗ್ಮೆಂಟೇಶನ್ ಅನ್ನು ಕೂಡ ನಿವಾರಿಸುತ್ತದೆ.
ವಿಟಮಿನ್ ಇ ತೈಲವನ್ನು ನಿಯಮಿತವಾಗಿ ಬಳಸುವುದರಿಂದ ಪಿಗ್ಮೆಂಟೇಶನ್ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
ಆಲೂಗಡ್ಡೆಯಲ್ಲಿರುವ ಕಿಣ್ವಗಳು ಪಿಗ್ಮೆಂಟೇಶನ್ ಕಲೆ ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ, ಆಲೂಗಡ್ಡೆ ತುರಿದು ಅದರ ರಸ ತೆಗೆದು ಮುಖಕ್ಕೆ ಹಚ್ಚಿ. ಕೆಲ ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.