ತೂಕ ಇಳಿಕೆಯಷ್ಟೇ ಅಲ್ಲ, ಕೆಲವರು ಏನು ತಿಂದರೂ, ಏನೇ ಮಾಡಿದರೂ ತೂಕ ಹೆಚ್ಚಾಗುವುದೇ ಇಲ್ಲ. ಹಾಗಂತ ಜಂಕ್ ಫುಡ್ ಗಳನ್ನು ತೂಕ ಹೆಚ್ಚಿಸುವುದು ಒಳ್ಳೆಯದಲ್ಲ.
ನೀವು ನಿಮ್ಮ ಜೀವನದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯಕರವಾಗಿಯೇ ತೂಕವನ್ನು ಹೆಚ್ಚಿಸಬಹುದು.
ನೀವು ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಲು ಸಮತೋಲಿತ ಆಹಾರಕ್ಕೆ ಪ್ರಾಮುಖ್ಯತೆ ನೀಡಿ.
ತೂಕ ಹೆಚ್ಚಳಕ್ಕೆ ಆಹಾರ ನಿರ್ಣಾಯಕ ಪಾತ್ರವಹಿಸುತ್ತದೆ. ಆದರೂ, ವ್ಯಾಯಾಮಗಳು ಕೂಡ ಸ್ನಾಯುಗಳನ್ನು ನಿರ್ಮಿಸಲು ಪ್ರಯೋಜನಕಾರಿ ಆಗಿವೆ.
ಜಲಸಂಚಯನವು ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ, ಒಟ್ಟಾರೆ ದೈಹಿಕ ಕಾರ್ಯಗಳನ್ನು ಬೆಂಬಲಿಸಲು ಸಹಕಾರಿ ಆಗಿದೆ.
ಕೆಲವರಲ್ಲಿ ನಿದ್ರೆಯ ಕೊರತೆಯಿಂದಲೂ ತೂಕ ಹೆಚ್ಚಾಗುವುದಿಲ್ಲ. ಇದನ್ನು ತಪ್ಪಿಸಲು ನಿತ್ಯ 7-8ಗಂಟೆಗಳ ಕಾಲ ನಿದ್ರೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.