ಹಳದಿ ಹಲ್ಲುಗಳ ಸಮಸ್ಯೆಯಿಂದ ಅನೇಕರು ನಗಲು ಮುಜುಗರಪಡುತ್ತಾರೆ. ಹೀಗಾಗಿ ಅಂತಹ ಹಳದಿ ಕಲೆಗಳನ್ನು ತೊಡೆದು ಹಾಕಲು ಕೆಲ ಮನೆಮದ್ದನ್ನು ನಿಮಗೆ ತಿಳಿಸಿಕೊಡಲಿದ್ದೇವೆ.
NCBI ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಅಡಿಗೆ ಸೋಡಾ ಹಲ್ಲುಗಳ ಮೇಲೆ ಅಂಟಿಕೊಂಡಿರುವ ಹಳದಿ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದು ಚಮಚ ಅಡಿಗೆ ಸೋಡಾದಲ್ಲಿ ಸ್ವಲ್ಪ ನೀರು ಮಿಶ್ರಣ ಮಾಡಿ. ಈ ಪೇಸ್ಟ್ನಿಂದ ಹಲ್ಲುಗಳನ್ನು ಬ್ರಷ್ ಮಾಡಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ.
ಉಪ್ಪು ನೀರು ನೈಸರ್ಗಿಕ ಸೋಂಕು ನಿವಾರಕವಾಗಿದ್ದು ಇದು ಕೂಡ ನಿಮ್ಮ ಹಲ್ಲುಗಳಿಂದ ಬ್ಯಾಕ್ಟೀರಿಯಾ ಮತ್ತು ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಹೈಡ್ರೋಜನ್ ಪೆರಾಕ್ಸೈಡ್ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿದ್ದು ಇದು ಕೂಡ ಹಲ್ಲುಗಳಿಂದ ಹಳದಿ ಕಲೆಯನ್ನು ತೆಗೆದುಹಾಕುತ್ತದೆ.
ಆಯಿಲ್ ಪುಲ್ಲಿಂಗ್ ಎಂದರೆ ಎಣ್ಣೆಯಿಂದ ಗಾರ್ಗ್ಲಿಂಗ್ ಮಾಡುವುದು. ಇದು ಬಾಯಿಯಿಂದ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕೆ ಬೆಸ್ಟ್ ತೆಂಗಿನೆಣ್ಣೆ.
ಕಿತ್ತಳೆ ಮತ್ತು ನಿಂಬೆ ಸಿಪ್ಪೆಗಳಲ್ಲಿ ಸಿಟ್ರಿಕ್ ಆಮ್ಲ ಇರುತ್ತದೆ. ಇದರ ಸಹಾಯದಿಂದ ಹಲ್ಲುಗಳನ್ನು ಉಜ್ಜಿದರೆ ಮುತ್ತಿನಂತೆ ಹಲ್ಲುಗಳು ಹೊಳೆಯುತ್ತವೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.