ಡ್ಯಾಂಡ್ರಫ್, ಕೂದಲುದುರುವಿಕೆ ನಿವಾರಿಸಿ ಉದ್ದ ಕೂದಲು ಪಡೆಯಲು ಈ ಟಿಪ್ಸ್ ಅನುಸರಿಸಿ

Yashaswini V
Sep 25,2024

ಜೀವನಶೈಲಿ

ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಡ್ಯಾಂಡ್ರಫ್, ಕೂದಲುದುರುವಿಕೆ ಸಮಸ್ಯೆಗಳನ್ನು ನಿವಾರಿಸಿ ಉದ್ದ ಕೂದಲು ಪಡೆಯಬಹುದು.

ನೀರು

ನಿತ್ಯ ಸಾಕಷ್ಟು ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ಇದರಿಂದ ಕೂದಲು ಆರೋಗ್ಯಕರವಾಗಿರುತ್ತದೆ.

ಪೌಷ್ಟಿಕ ಆಹಾರ

ಹಸಿರು ಸೊಪ್ಪು-ತರಕಾರಿಗಳು, ಕ್ಯಾರೆಟ್ ಸೇರಿದಂತೆ ಪ್ರೊಟೀನ್ ಯುಕ್ತ ಪೌಷ್ಟಿಕ ಆಹಾರಗಳು ನಿಮ್ಮ ಡಯಟ್ ನಲ್ಲಿದ್ದರೆ ಇದು ಕೂದಲಿನ ಬೆಳವಣಿಗೆಗೆ ಸಹಕಾರಿ ಆಗಿದೆ.

ಕೂದಲಿಗೆ ಎಣ್ಣೆ

ನಿಮ್ಮ ಕೂದಲಿಗೆ ಸರಿ ಹೊಂದುವ ಯಾವುದೇ ಎಣ್ಣೆಯಾದರೂ ಸರಿ ವಾರಕ್ಕೆ ಎರಡರಿಂದ ಮೂರು ಬಾರಿ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಇದು ಕೂದಲಿನ ಡ್ಯಾಂಡ್ರಫ್ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ.

ಅಲೋವೆರಾ

ವಾರಕ್ಕೆ ಒಮ್ಮೆಯಾದರೂ ನೀವು ತಲೆಗೆ ಸ್ನಾನ ಮಾಡುವ ಮೊದಲು ತಾಜಾ ಅಲೋವೆರಾ ಜೆಲ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಬಳಿಕ ಹೇರ್ ವಾಶ್ ಮಾಡಿ.

ಮೊಸರು

ಮೊಸರು ಕೂದಲಿಗೆ ಉತ್ತಮ ಕಂಡೀಷನಿಂಗ್ ಆಗಿದ್ದು ಇದು ಕೂದಲಿನ ಸಮಸ್ಯೆಗಳಿಗೆ ನೈಸರ್ಗಿಕ ಚಿಕಿತ್ಸೆ ನೀಡಲು ಕೂಡ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ ಹುಳಿ ಮೊಸರನ್ನು ಹೇರ್ ಮಾಸ್ಕ್ ಆಗಿ ಬಳಸಿ.

ಹೇರ್ ವಾಶ್

ವಾರದಲ್ಲಿ ಒಂದೆರಡು ಬಾರಿ ಉಗುರು ಬೆಚ್ಚಗಿನ ನೀರಿನಲ್ಲಿ ಹೇರ್ ವಾಶ್ ಮಾಡಿ ನೆತ್ತಿಯನ್ನು ಸ್ವಚ್ಛಗೊಳಿಸಿ. ಇದು ಕೂದಲು ನೈಸರ್ಗಿಕ ತೈಲವನ್ನು ಕಾಪಾಡಿಕೊಳ್ಳಲು, ಕೂಡಲ ಬೆಳವಣಿಗೆಗೆ ಸಹಕಾರಿ ಆಗಿದೆ.

ಒದ್ದೆ ಕೂದಲು

ಆತುರಾತುರವಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಹಾಗೂ ಒದ್ದೆ ಕೂದಲನ್ನು ಬಾಚುವ ಅಭ್ಯಾಸವನ್ನು ತಪ್ಪಿಸಿ. ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story