ಈ ಟಿಪ್ಸ್ ಟ್ರೈ ಮಾಡಿ... ಅಡುಗೆ ಮನೆಗೆ ಒಂದೇ ಒಂದು ಜಿರಳು ಕೂಡ ಬರಲ್ಲ!

ಜಿರಳೆ ಕಾಟ

ಯಾವ ಸಮಯ ಎಂಬುದೇ ಇರಲ್ಲ.. ಮನೆಯಲ್ಲಿ ಎಲ್ಲೆಂದರಲ್ಲಿ ಜಿರಳೆಗಳು ಕಾಣಿಸಿಕೊಳ್ಳುತ್ತವೆ. ಅಂದಹಾಗೆ ಈ ಜಿರಳೆಗಳು ಹೆಚ್ಚಾಗಿ ಅಡುಗೆಮನೆಯಲ್ಲಿ ವಾಸಿಸುತ್ತವೆ.

ಆರೋಗ್ಯ ಸಮಸ್ಯೆ

ಬೇಯಿಸಿದ ಪಾತ್ರೆಗಳು ಮತ್ತು ಆಹಾರದ ಮೇಲೆ ಓಡಾಡುತ್ತಿರುತ್ತವೆ. ಇನ್ನು ಇವುಗಳು ಸ್ಪರ್ಶಿಸಿದ ಆಹಾರ ಅಪ್ಪಿತಪ್ಪಿ ಸೇವಿಸಿದರೆ, ವೈರಲ್ ಸೋಂಕು, ಜ್ವರ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಟಿಪ್ಸ್‌

ಹೀಗಿರುವಾಗ ಜಿರಳೆಗಳನ್ನು ಮನೆಯಿಂದ ಓಡಿಸಲು ಕೆಲ ಟಿಪ್ಸ್‌ʼಗಳನ್ನು ಅನುಸರಿಸುವುದು ಮುಖ್ಯ.

ಬಿರಿಯಾನಿ ಎಲೆ

ಅದರಲ್ಲಿ ಒಂದು ಟಿಪ್ಸ್‌ ಎಂದರೆ, ಬಿರಿಯಾನಿ ಎಲೆಗಳನ್ನು ನುಣ್ಣಗೆ ಪುಡಿ ಮಾಡಿ, ಕರ್ಪೂರದಲ್ಲಿ ಸೇರಿಸಿ. ಅದನ್ನು ಮನೆಯ ಮೂಲೆಗಳಲ್ಲಿ ಇಡಿ, ಇದರ ವಾಸನೆಗೆ ಮತ್ತೆಂದೂ ಬಾರದಂತೆ ಜಿರಳೆಗಳು ಓಡಿಹೋಗುತ್ತವೆ.

ಬೋರಿಕ್ ಪೌಡರ್

ಬೋರಿಕ್ ಪೌಡರ್ ಕೂಡ ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಇದನ್ನು ಹಿಟ್ಟಿನಲ್ಲಿ ಮಿಶ್ರಣ ಮಾಡಿ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಜಿರಳೆಗಳು ಹೆಚ್ಚು ಚಲಿಸುವ ಸ್ಥಳದಲ್ಲಿ ಅವುಗಳನ್ನು ಇರಿಸಿ. ಜಿರಳೆಗಳು ಇದನ್ನು ತಿಂದರೆ ಅಥವಾ ವಾಸನೆ ಬಂದರೂ ಸಾಕು ಓಡಿಹೋಗುತ್ತವೆ.

ಅಡಿಗೆ ಸೋಡಾ

ಸ್ವಲ್ಪ ಅಡಿಗೆ ಸೋಡಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ವಿನೆಗರ್ ಬೆರೆಸಿ ಜಿರಳೆಗಳು ಹೆಚ್ಚು ಓಡಾಡುವ ಮೂಲೆಗಳಿಗೆ ಸ್ಪ್ರೇ ಮಾಡಿ. ಹೀಗೆ ಮಾಡುವುದರಿಂದ ಜಿರಳೆಗಳು ಓಡಿ ಹೋಗುತ್ತವೆ.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story