ತಲೆಯಲ್ಲಿ ತುರಿಕೆ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದುಗಳು

ತುರಿಕೆ

ಬದಲಾದ ವಾತಾವರಣ, ತಲೆಹೊಟ್ಟು, ಕೊಳಕು, ಕಳಪೆ ಎಣ್ಣೆಯ ಬಳಕೆಯಿಂದಾಗಿ ನೆತ್ತಿಯಲ್ಲಿ ತುರಿಕೆ ಸಮಸ್ಯೆ ಉಂಟಾಗಬಹುದು. ಆದರೂ ಕೆಲವು ಮನೆಮದ್ದುಗಳಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಸಾರಭೂತ ತೈಲಗಳು

ಕೂದಲಿಗೆ ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ಎಣ್ಣೆಗಳನ್ನು ಬೆರೆಸಿ ಹಚ್ಚಿ. ಒಂದು ದಿನ ಬಿಟ್ಟು ತಲೆಗೆ ಸ್ನಾನ ಮಾಡಿದರೆ ತುರಿಕೆ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.

ಹೇರ್ ಮಾಸ್ಕ್

ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಇದರಲ್ಲಿ ಸ್ವಲ್ಪ ಜೇನುತುಪ್ಪ ಬೆರೆಸಿ ಕೂದಲಿನ ಬುಡಕ್ಕೆ ಅನ್ವಯಿಸಿ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ.

ಸ್ಟೀಮ್

ಎಣ್ಣೆ ಮಸಾಜ್ ಮಾಡಿ ಬಿಸಿ ನೀರಿನಲ್ಲಿ ಟವಲ್ ಅದ್ದಿ ಅದನ್ನು ಕೂದಲಿಗೆ ಸುತ್ತಿಕೊಳ್ಳಿ. ಇದರಿಂದ ನೆಟ್ಟಿಗೆ ಸ್ಟೀಮ್ ಮಾಡಿದಂತಾಗುತ್ತದೆ. ಆವಿಯು ನೆತ್ತಿಯಲ್ಲಿ ತುರಿಕೆ ಸಮಸ್ಯೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಆಗಿದೆ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ಅದ್ಭುತವದ್ ಆಂಟಿಫಂಗಲ್ ಏಜೆಂಟ್ ಆಗಿದ್ದು ನೀರಿನಲ್ಲಿ ಇದನ್ನು ಬೆರೆಸಿ ಕೂದಲಿನ ಬುದಕ್ಕೆ ಸಿಂಪಡಿಸಿ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.

ಅಲೋವೆರಾ

ಅಲೋವೇರಾ ಜೆಲ್ ಅನ್ನು ಕೂದಲಿನ ಬುಡಕ್ಕೆ ಅನ್ವಯಿಸಿ 20 ನಿಮಿಷಗಳ ಬಳಿಕ ಸೌಮ್ಯವಾಗಿ ಹೇರ್ ವಾಶ್ ಮಾಡುವುದರಿಂದ ನೆತ್ತಿ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story