ಮನೆಯ ನೆಲವನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಿದರೂ ಕೊಳೆಯಾಗುತ್ತದೆ. ಕೆಲವೊಮ್ಮೆ ಕೆಲವು ಕೆಲಗಳು ಎಷು ತಿಕ್ಕಿದರೂ ಹೋಗುವುದಿಲ್ಲ.
ಆಗ ಒರೆಸುವ ನೀರಿಗೆ ಈ ವಸ್ತುಗಳನ್ನು ಸೇರಿಸಿ ನೋಡಿ. ಕಲೆ ತಕ್ಷಣ ಮಾಯವಾಗುತ್ತದೆ.
ಕಲೆ ತೆಗೆಯಲು ಅಡುಗೆ ಸೋಡಾ ಬಹಳ ಉಪಯುಕ್ತ. ನೆಲ ಒರೆಸುವ ನೀರಿಗೆ ಒಂದು ಚಮಚ ಅಡುಗೆ ಸೋಡಾ ಸೇರಿಸಿ.
ನೆಲ ಒರೆಸಿದ ಮೇಲೆ ಮನೆ ಪರಿಮಳಯುಕ್ತವಾಗಿರಬೇಕಾದರೆ ನೆಲ ಒರೆಸುವ ನೀರಿಗೆ ನಾಪ್ತಲಿನ್ ಬಾಲ್ ಗಳನ್ನು ಹಾಕಿ. ಇದರಿಂದ ಮನೆ ಒರೆಸಿದ ಮೇಲೆ ಸುವಾಸನೆ ಇರುತ್ತದೆ.
ವಿನೆಗರ್ ಮೊಂಡುತನದ ಕಲೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ನೆಲ ಒರೆಸುವ ನೀರಿಗೆ ನಿಂಬೆ ರಸವನ್ನು ಬೆರೆಸಿದರೆ ಕೂಡಾ ನೆಲದ ಮೇಲಿನ ಕಲೆ ಮಾಯವಾಗುತ್ತದೆ.
ನೆಲ ಒರೆಸುವ ನೀರಿಗೆ ಡಿಟರ್ಜೆಂಟ್ ಸೇರಿಸಬಹುದು. ಇದು ಕಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಈ ಎಲ್ಲಾ ವಸ್ತುಗಳ ಹೊರತಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ಲೀನರ್ ಗಳನ್ನು ಬಳಸುವ ಮೂಲಕ ಕೂಡಾ ನೆಲದ ಮೇಲಿನ ಕಲೆಯನ್ನು ಹೋಗಲಾಡಿಸಬಹುದು.
ಮೇಲಿನ ವಿಧಾನವನ್ನು ಬಳಸಿ ಮನೆಯ ಫ್ಲೋರ್ ಮೇಲಿನ ಕಲೆಯನ್ನು ಹೋಗಲಾಡಿಸಿ ಫಲ ಫಳನೆ ಹೊಳೆಯುವಂತೆ ಮಾಡಿ.