ಮಧುಮೇಹಿಗಳಿಗೆ ವರದಾನವಿದ್ದಂತೆ ಈ 5 ಗಿಡಮೂಲಿಕೆ ಚಹಾ
ಇತ್ತೀಚಿನ ದಿನಗಳಲ್ಲಿ ಮಧುಮೇಹ ಒಂದು ಸರ್ವೇ ಸಾಮಾನ್ಯವಾದ ಕಾಯಿಲೆ ಆಗಿದೆ. ಇದೊಂದು ಜೀವಮಾನದ ಕಾಯಿಲೆಯಾಗಿದ್ದು ನಾವು ಸೇವಿಸುವ ಆಹಾರದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು.
ಆಯುರ್ವೇದದ ಪ್ರಕಾರ, ಮಧುಮೇಹಕ್ಕೆ ಕೆಲವು ಹರ್ಬಲ್ ಟೀಗಳನ್ನು ರಾಮಬಾಣವಿದ್ದಂತೆ ಎಂದು ಹೇಳಲಾಗುತ್ತದೆ. ಅಂತಹ 5 ಗಿಡಮೂಲಿಕೆ ಚಹಾಗಳು ಯಾವುವು ಎಂದು ನೋಡುವುದಾದರೆ...
ಸಾಮಾನ್ಯವಾಗಿ ಹೆಚ್ಚಿನ ಜನರು ತೂಕ ನಷ್ಟಕ್ಕಾಗಿ ಗ್ರೀನ್ ಟೀ ಸೇವಿಸುತ್ತಾರೆ. ಆದರೆ, ಈ ಟೀ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ಮಧುಮೇಹಿಗಳಿಗೆ ಇದು ಪ್ರಯೋಜನಕಾರಿ ಆಗಿದೆ.
ವರದಿಯೊಂದರ ಪ್ರಕಾರ ಅಲೋವೆರಾ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಇದರ ಚಹಾ ತಯಾರಿಸಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎನ್ನಲಾಗುತ್ತದೆ.
ದಾಲ್ಚಿನ್ನಿ ಒಂದು ರೀತಿಯ ಮಸಾಲೆ, ಇದನ್ನು ಆಹಾರವನ್ನು ರುಚಿಕರವಾಗಿಸಲು ಬಳಸಲಾಗುತ್ತದೆ. ಮಧುಮೇಹಿಗಳು ಈ ಹರ್ಬಲ್ ಟೀ ಸೇವನೆಯಿಂದ ಬ್ಲಡ್ ಶುಗರ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು.
ಅರಿಶಿನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಅರಿಶಿನದ ಚಹಾವನ್ನು ಕುಡಿಯಿರಿ.
ಶುಂಠಿ ಚಹಾವನ್ನು ಮಧುಮೇಹ ರೋಗಿಗಳಿಗೆ ಅತ್ಯುತ್ತಮ ಪಾನೀಯ ಎಂದು ಪರಿಗಣಿಸಲಾಗಿದೆ. ಶುಂಠಿ ಚಹಾವನ್ನು ಸೇವಿಸಿದಾಗ ಅದು ಕಾರ್ಬೋಹೈಡ್ರೇಟ್‌ಗಳಿಂದ ಉಂಟಾಗುವ ಸಕ್ಕರೆಯ ಗರಿಷ್ಠ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.