ಕೂದಲು ಉದ್ದನೆ ಬೆಳೆಯ ಬೇಕಾದರೆ ತಲೆ ಸ್ನಾನಕ್ಕೂ ಇಷ್ಟು ಗಂಟೆ ಮುನ್ನ ಎಣ್ಣೆ ಹಚ್ಚಬೇಕು !

Ranjitha R K
Aug 19,2024

ಕೂದಲಿಗೆ ಎಣ್ಣೆ

ಕೂದಲ ಆರೋಗ್ಯಕ್ಕೆ ನಾವು ಕೂದಲಿಗೆ ಎಣ್ಣೆ ಹಚ್ಚುತ್ತೇವೆ. ಆದರೆ ಸರಿಯಾದ ವಿಧಾನದಲ್ಲಿ ಎಣ್ಣೆ ಹಚ್ಚಿದಾಗ ಮಾತ್ರ ಕೂದಲು ಉದ್ದನೆ ಬೆಳೆಯುತ್ತದೆ.

ಕೂದಲು ಉದುರುವುದಕ್ಕೆ ಮದ್ದು

ಕೂದಲು ಉದುರದಂತೆ ತಡೆಯಲು, ಕೂದಲಿಗೆ ಎಣ್ಣೆ ಹಚ್ಚಲೇ ಬೇಕು. ವಾರದಲ್ಲಿ ೨ ರಿಂದ ೩ ಬಾರಿಯಾದರೂ ಎಣ್ಣೆ ಹಚ್ಚಬೇಕು.

ಯಾವಾಗ ಎಣ್ಣೆ ಹಚ್ಚಬೇಕು

ತಲೆ ಸ್ನಾನ ಮಾಡುವುದಕ್ಕೂ ಮುನ್ನ ಕೂದಲಿಗೆ ಎಣ್ಣೆ ಹಚ್ಚಬೇಕು, ತಲೆ ಸ್ನಾನ ಮಾಡುವ ೩ ಗಂಟೆ ಮುನ್ನ ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚಬೇಕು.

ಹೀಗಾಗುವುದು

ಸ್ನಾನ ಮಡಿದ ಬಳಿಕ ಎಣ್ಣೆ ಹಚ್ಚಿದರೆ ಕುದಲಿನಲ್ಲಿ ಧೂಳು, ಮಣ್ಣು ಹೀಗೆ ಕೊಳೆ ಅಂಟಿ ಕೊಳ್ಳಬಹುದು.

ಹೀಗೆ ಹಚ್ಚಿ

ಕೂದಲಿಗೆ ಎಣ್ಣೆ ಹಚ್ಚುವ ಮುನ್ನ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿಕೊಳ್ಳಿ. ನಂತರ ಈ ಎಣ್ಣೆಯನ್ನು ಬೆರಳುಗಳ ಸಹಾಯದಿಂದ ಕೂದಲಿಗೆ ಹಚ್ಚಿ.

ಮಸಾಜ್ ಮಾಡುವ ರೀತಿ

ಕೂದಲ ಮಸಾಜ್ ಮಾಡಲು ಬೆರಳಿನ ತುದಿಗಳನ್ನಷ್ಟೇ ಬಳಸಿ, ಮಸಾಜ್ ಮಾಡುವಾಗ ಮೃದುವಾಗಿ ಮಸಾಜ್ ಮಾಡಬೇಕು ಎನ್ನುವುದನ್ನು ಮರೆಯಬೇಡಿ.

ಇದು ಬಹಳ ಮುಖ್ಯ

ಕೂದಲನ್ನು ಮಸಾಜ್ ,ಮಾಡಿದ ಬಳಿಕ ಬಿಸಿ ನೀರಿನಲ್ಲಿ ಟವಲ್ ಅನ್ನು ಅಡ್ಡಿ ಕೂದಲಿಗೆ ಸುತ್ತಿಕೊಳ್ಳಿ. ೧೦ ನಿಮಿಷದವರೆಗೆ ಹೀಗೆ ಇರಲಿ.

ಕೂದಲ ಬೆಳವಣಿಗೆ

ಈ ರೀತಿ ಎಣ್ಣೆ ಹಚ್ಚಿದರೆ ಕೂದಲು ಸದೃಢವಾಗಿ, ಉದ್ದವಾಗಿ ಬೆಳೆಯುವುದು.


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story