ನಿಮ್ಮ ಮನೆಯಲ್ಲಿಯೂ ದೊಡ್ಡ ಪತ್ರೆ ಗಿಡ ಇದ್ದರೆ ಈ ವಿಚಾರ ತಿಳಿದಿರಲಿ !

ಔಷಧೀಯ ಗುಣಗಳು

ದೊಡ್ಡ ಪಾತ್ರೆಯಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ಪ್ರಯೋಜನಗಳಾಗುವುದು.

ಗೊಬ್ಬರ

ದೊಡ್ಡ ಪಾತ್ರೆಯ ಗಿಡಕ್ಕೆ ಹೆಚ್ಚು ಗೊಬ್ಬರ ಹಾಕುವ ಅಗತ್ಯ ಇಲ್ಲ. ಇದು ಬೆಳೆಯುತ್ತಿದ್ದ ಹಾಗೆ ಬಿಸಿಲು ಮತ್ತು ಸಮ ಪ್ರಮಾಣದಲ್ಲಿ ಬಿದ್ದರೆ ಸಾಕು.

ಯಾವ ಕಾಲ ಸೂಕ್ತ

ಮನೆಯಲ್ಲಿ ದೊಡ್ಡ ಪತ್ರೆಯಗಿದ ನೆಡುವುದಾದರೆ ಮಳೆ ಮತ್ತು ಚಳಿಗಾಲ ಇದಕ್ಕೆ ಸೂಕ್ತ ಸಮಯ. ಈ ಹವಾಮಾನದಲ್ಲಿ ಈ ಸಸಿ ಉತ್ತಮವಾಗಿ ಬೆಳೆಯುತ್ತದೆ.

ಎಲೆ ಹೀಗೆ ಮುರಿಯಿರಿ

ಈ ಸಸ್ಯದ ಎಲೆಯನ್ನು ಮುರಿಯುವಾಗ ಕೆಳಗಿನಿಂದ ಎಲೆ ತೆಗೆದುಕೊಂಡು ಬರಬೇಕು. ಹಾಗೆ ಮಾಡಿದಾಗ ಮಾತ್ರ ಅದು ಚೆನ್ನಾಗಿ ಬೆಳೆಯುತ್ತದೆ.

ಬಿಸಿಲಿನ ಅಗತ್ಯ

ದೊಡ್ಡ ಪತ್ರೆಯ ಗಿಡಕ್ಕೆ ಬಿಸಿಲಿನ ಅಗತ್ಯ ಇರುತ್ತದೆ. ಹಾಗಾಗಿ ಬಿಸಿಲು ಬೀಳುವ ಜಾಗದಲ್ಲಿ ಈ ಸಸಿ ನಡಿ. ಅಲ್ಲದೆ ಸಂಜೆ ಆಗುತ್ತಿದ್ದ ಹಾಗೆ ನೀರು ಚಿಮುಕಿಸಿ.

ಕೀಟ ನಾಶಕ

ಈ ಸಸ್ಯದಲ್ಲಿ ಹುಳ ಕಾಣಿಸಿಕೊಂಡರೆ ಆರ್ಗ್ಯಾನಿಕ್ ಕೀಟ ನಾಶಕವನ್ನು ಸಿಂಪಡಿಸಿ. ಇದಕ್ಕಾಗಿ ಇಂಗು ಅಥವಾ ಸಾಬೂನಿನ ನೀರು ಮಾಡಿ ಗಿಡಕ್ಕೆ ಹಾಕಿ.

ಹೀಗೆ ಬೆಳೆಸಿ

ಈ ಗಿಡವನ್ನು ಮನೆಯಲ್ಲಿ ಬೆಳೆಸಲು ಒಮಕಾಳನ್ನು ಬಳಸಬಹುದು.ಅಥವಾ ಗಿಡವನ್ನು ಅಥವಾ ಗೆಲ್ಲು ತೆಗೆದು ನೆಡಬಹುದು.

ಉತ್ತಮ ಆರೋಗ್ಯ

ಈ ಸಸ್ಯದ ಕಾಳು ಮತ್ತು ಗಿಡ ಎರಡೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story