ಕೂದಲು ಉದುರುವುದನ್ನು ತಡೆಯಲು ಕೆಲವು ಉಪಾಯಗಳನ್ನು ಮನೆಯಲ್ಲಿಯೇ ಅನುಸರಿಸಿಕೊಳ್ಳಬೇಕು.
ನಿತ್ಯ ರಾತ್ರಿ ಎಣ್ಣೆ ಇಲ್ಲದೆ ನೆತ್ತಿಯ ಮೇಲೆ ಮಸಾಜ್ ಮಾಡುವುದರಿಂದ ಹೆಚ್ಚಿನ ಅನುಕೂಲವಾಗುವುದು. ಇದರಿಂದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ.
ಕೂದಲಿನಲ್ಲಿ ಕೊಳೆ ಕೊಳಕು ಇದ್ದರೆ ಕೂದಲು ಉದುರುವುದು, ಕೂದಲು ಒಣಗುವುದು ಮುಂತಾದ ಸಮಸ್ಯೆ ಎದುರಾಗುವುದು. ಹಾಗಾಗಿ ಕೂದಲನ್ನು ನಿಯಮಿತವಾಗಿ ಸ್ವಚ್ಚಗೊಳಿಸುತ್ತ ಇರಬೇಕು.
ಕೆಲವು ಮಹಿಳೆಯರು ರಾತ್ರಿ ಕೂದಲನ್ನು ಗಟ್ಟಿಯಾಗಿ ಕಟ್ಟಿಕೊಂಡು ಮಲಗುತ್ತಾರೆ. ಆದರೆ ಹಾಗೆ ಮಾಡಬಾರದು.
ಕೂದಲು ಉದ್ದವಾಗಲು ಮತ್ತು ಮತ್ತು ಗಟ್ಟಿಯಾಗಿಸಲು ಯೋಗಾಸನ ಸಹಾಯ ಮಾಡುತ್ತದೆ. ಇದಕ್ಕಾಗಿ ನಿತ್ಯ ಬಾಲಾಯಾಮ ಯೋಗ ಮಾಡಬೇಕು.
ಇನ್ನು ಕೂದಲ ಆರೋಗ್ಯಕ್ಕಾಗಿ ನಿತ್ಯ ಹಸಿರು ತರಕಾರಿ, ವಿಟಮಿನ್ ಸಿ ಅಧಿಕವಾಗಿರುವ ಆಹಾರಗಳನ್ನು ಸೇವಿಸಬೇಕು.
ಕೂದಲು ಉದುರದಂತೆ ಕಾಪಾಡಲು ನಿತ್ಯ ಎರಡು ಬಾರಿ ಕೂದಲು ಬಾಚಬೇಕು.ಇದರಿಂದ ಕೂದಲ ಆರೋಗ್ಯವನ್ನು ಕಾಪಾಡಬಹುದು.
ನಿತ್ಯ ವ್ಯಾಯಾಮ ಮಾಡುತ್ತಿದ್ದರೆ ಕೂದಲು ಉದುರುವುದನ್ನು ತಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.