1. ಸವತೆಕಾಯಿ ಸೇವಿಸುವಾಗ ನೀವೂ ಈ ತಪ್ಪು ಮಾಡುತ್ತೀರಾ? ಇಂದೇ ನಿಲ್ಲಿಸಿ
2. ಸವತೆಕಾಯಿ ವಿಟಮಿನ್, ಮೀನರಲ್ ಹಾಗೂ ಎಲೆಕ್ಟ್ರೋಲೈಟ್ ಗಳ ಆಗರವಾಗಿದೆ. ಬೇಸಿಗೆಯಲ್ಲಿ ಇದರ ಸೇವನೆ ಶರೀರಕ್ಕೆ ಹಲವು ಲಾಭಗಳನ್ನು ನೀಡುತ್ತದೆ.
3. ಬೇಹುತೇಕ ಜನರು ಸವತೆಕಾಯಿಯನ್ನು ಸಲಾಡ್, ಸ್ಯಾಂಡ್ವಿಚ್ ಹಾಗೂ ಕೋಸಂಬರಿಗಳಂತಹ ಆಹಾರ ಪದಾರ್ಥದ ರೂಪದಲ್ಲಿ ತಿನ್ನಲು ಇಷ್ಟಪಡುತ್ತಾರೆ. ಆದರೆ, ಇದರ ಜೊತೆಗೆ ಕೆಲ ವಿಶೇಷ ಸಂಗತಿಗಳನ್ನು ಕೂಡ ನೆನಪಿನಲ್ಲಿಡುವುದು ಅವಶ್ಯಕ.
4. ಶೇ.95 ರಷ್ಟು ಭಾಗ ನೀರನ್ನು ಹೊಂದಿರುವ ಸ್ವತೆಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಮೇಗ್ನೆಸಿಯಮ್, ಕಾಪರ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಹಾಗೂ ಸಿಲಿಕಾ ಸೇರಿದಂತೆ ಹಲವು ಪೋಷಕಾಂಶಗಳಿವೆ.
5. ಹಸಿ ತರಿಕಾರಿ ಹಾಗೂ ಹಣ್ಣುಗಳ ಜೊತೆಗೆ ಸವತೆಕಾಯಿ ಸೇವನೆ ಶರೀರಕ್ಕೆ ಉತ್ತಮ ಲಾಭ ನೀಡುತ್ತದೆ ಹಾಗೂ ಚರ್ಮದ ಕಾಂತಿಯನ್ನು ಇದು ಹೆಚ್ಚಿಸುತ್ತದೆ.
6. ಸಾಕಷ್ಟು ಸಮಯದ ಹಿಂದೆ ಕತ್ತರಿಸಿ ಇದ್ದ ಸವತೆಕಾಯಿಯನ್ನು ಸೇವಿಸಬಾರದು. ಇದು ಶರೀರಕ್ಕೆ ಹಾನಿ ಉಂಟು ಮಾಡುತ್ತದೆ. ಆರೋಗ್ಯದ ಮೇಲೆ ಇದು ವಿಪರೀತ ಪರಿಣಾಮ ಬೀರುತ್ತದೆ.
7. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸವತೆಕಾಯಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆದರೆ ಸವತೆ ಕಾಯಿ ಸೇವನೆಯ ಬಳಿಕ ತಕ್ಷಣಕ್ಕೆ ನೀರನ್ನು ಕುಡಿಯಬಾರದು.
8. ಸವತೆಕಾಯಿಯ ಸಿಪ್ಪೆಯಲ್ಲಿ ಸಿಲಿಕಾ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳನ್ನು ಬಳಪಡಿಸುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಸಾಕಷ್ಟು ಕಡಿಮೆ ಮಾಡುತ್ತದೆ.
9. ಈ ಲೇಖನದ್ಲಲಿ ನೀಡಲಾಗಿರುವ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ.