ಹಿಂದೂ ಧರ್ಮದಲ್ಲಿ ನವರಾತ್ರಿಗೆ ವಿಶೇಷ ಮಹತ್ವವಿದೆ. ಇದರಲ್ಲಿ ದುರ್ಗಾದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಟ್ಟರೆ, ವಿಶೇಷ ಫಲ ಸಿಗುವುದು.
ನಂಬಿಕೆಗಳ ಪ್ರಕಾರ ನವರಾತ್ರಿ ವೇಳೆ ಮನೆಯಲ್ಲಿ ತುಳಸಿ ಸಸಿಯನ್ನು ನೆಟ್ಟರೆ ಲಕ್ಷ್ಮೀ ದೇವಿಯ ಜೊತೆಗೆ ದುರ್ಗಾ ದೇವಿ ಕೂಡಾ ಪ್ರಸನ್ನಳಾಗುತ್ತಾಳೆ.
ನವರಾತ್ರಿ ವೇಳೆ ಮನೆಯಲ್ಲಿ ಬಾಳೆ ಗಿಡ ನೆಟ್ಟರೆ ಸುಖ ಶಾಂತಿ ನೆಲೆಯಾಗುತ್ತದೆ.
ಶಂಖ ಪುಷ್ಟದ ಗಿಡವನ್ನು ಮನೆಯಲ್ಲಿ ನವರಾತ್ರಿ ವೇಳೆ ನೆಟ್ಟರೆ ಸಕಾರಾತ್ಮಕ ಅಲೆಗಳು ಮನೆಯನ್ನು ಪ್ರವೇಶಿಸುವುದು.
ಲ್ಯಾವೆಂಡರ್ ಸಸಿಯನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುವುದು.
ಈ ಸಸಿಯನ್ನು ನವರಾತ್ರಿ ವೇಳೆ ಮನೆಯ ಎದುರು ಅಥವಾ ಮನೆಯ ಸಮೀಪದಲ್ಲಿ ನೆಡಬೇಕು.
ಪಾರಿಜಾತ ಗಿಡವನ್ನು ನವರಾತ್ರಿ ವೇಳೆ ನೆಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯಾಗುವುದು.
ಪಾರಿಜಾತದ ಗಿಡ ನೆಡುವ ಮೊದಲು ಸ್ನಾನ ಮಾಡಿ ಶುಭ್ರ ವಸ್ತ್ರವನ್ನು ತೊಟ್ಟು ನಂತರ ಈ ಸಸಿಯನ್ನು ನೆಡಬೇಕು.
ಮೇಲೆ ಹೇಳಿದ ಸಸಿಗಳನ್ನು ಮನೆಗೆ ತಂದರೆ ಶುಭ ಫಲ ಪ್ರಾಪ್ತಿಯಾಗುವುದು.