ಮನೆಯಿಂದ 'ನಕಾರಾತ್ಮಕ ಶಕ್ತಿ' ಹೊರಹಾಕಲು ಈ ಸಿಂಪಲ್ ವಾಸ್ತು ಟಿಪ್ಸ್ ಫಾಲೋ ಮಾಡಿ!

Yashaswini V
Dec 04,2024

ನೆಗೆಟಿವ್ ಎನರ್ಜಿ

ಮನೆಯಲ್ಲಿ ನೆಗೆಟಿವ್ ಎನರ್ಜಿ ಕುಟುಂಬದಲ್ಲಿ ಸಂಬಂಧಗಳ ಮೇಲೆ, ಹಣಕಾಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ವಾಸ್ತು ಟಿಪ್ಸ್

ಕೆಲವು ಸಿಂಪಲ್ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸುಲಭವಾಗಿ ನಿವಾರಿಸಬಹುದು.

ಸ್ವಸ್ತಿಕ್, ಓಂ

ಮನೆಯ ಮುಖ್ಯ ದ್ವಾರದ ಮೂಲಕವೇ ಮನೆಗೆ ಪಾಸಿಟಿವ್, ನೆಗೆಟಿವ್ ಎನರ್ಜಿ ಪ್ರವೇಶಿಸುತ್ತದೆ. ಹಾಗಾಗಿ, ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ್, ಓಂ ಎಂಬ ಶುಭ ಚಿಹ್ನೆಗಳನ್ನು ಬರೆಯಿರಿ.

ಮನೆಯ ಸ್ವಚ್ಛತೆ

ಮನೆಯನ್ನು ಸ್ವಚ್ಛಮಾಡುವಾಗ ಮನೆ ಒರೆಸುವ ನೀರಿನಲ್ಲಿ ಚಿಟಿಕೆ ಉಪ್ಪನ್ನು ಬೆರೆಸಿ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸಹಕಾರಿ ಆಗಿದೆ.

ಕಸ

ಯಾವುದೇ ಕಾರಣಕ್ಕೂ ಮನೆಯ ಮುಖ್ಯ ದ್ವಾರದ ಬಳಿ ಕಸವನ್ನು ಇಡಬೇಡಿ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ.

ಈಶಾನ್ಯ ದಿಕ್ಕು

ಮನೆಯ ಈಶಾನ್ಯ ದಿಕ್ಕು ಸಕಾರಾತ್ಮಕ ಶಕ್ತಿಯ ಕೇಂದ್ರವಾಗಿದೆ. ಹಾಗಾಗಿ, ಈ ದಿಕ್ಕಿನಲ್ಲಿ ಸದಾ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.

ಮುರಿದ ವಸ್ತುಗಳು

ಮನೆಯಲ್ಲಿ ಕೆಲಸಕ್ಕೆ ಬಾರದ ಮುರಿದ, ತುಕ್ಕು ಹಿಡಿದ ಪದಾರ್ಥಗಳಿದ್ದರೆ ಅವುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ. ಇಂತಹ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ.

ಧೂಪ, ಅಗರಬತ್ತಿ

ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಧೂಪ-ಅಗರಬತ್ತಿಯನ್ನು ಬಳಸಿ. ಇದು ಮನೆಯ ನಕಾರಾತ್ಮಕತೆಯನ್ನು ಹೊರಹಾಕಿ, ಪಾಸಿಟಿವ್ ಎನರ್ಜಿ ತುಂಬುವಂತೆ ಮಾಡುತ್ತದೆ.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story