ಗೌತಮ್‌ ಗಂಭೀರ್‌ ಕೋಚ್‌ ಆಡಳಿತದಲ್ಲಿ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಆಟಗಾರರು ಇವರೇ ನೋಡಿ...

ಭಾರತ ತಂಡದ ರಾಹುಲ್‌ ದ್ರಾವಿಡ್‌ ಕೋಚ್ ಸ್ಥಾನಕ್ಕೆ ವಿದಾಯ ಹೇಳಿದ ಬೆನ್ನಲ್ಲೆ ಬಿಸಿಸಿಐ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರನ್ನು ಟೀಂ ಇಂಡಿಯಾದ ನೂತನ ಕೋಚ್‌ ಆಗಿ ಘೋಷಣೆ ಮಾಡಿದೆ.

ಭಾರತ vs ಶ್ರೀಲಂಕಾ

ಜುಲೈ 27 ರಂದು ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದೊಂದಿಗೆ ಗೌತಮ್‌ ಗಂಭೀರ್‌ ಅವರ ಕೋಚ್‌ ಅವಧಿ ಶುರುವಾಗಲಿದೆ.

ಭಾರತ ತಂಡ

ಈ ಕ್ರಮದಲ್ಲಿ ಭಾರತ ತಂಡ ಶ್ರೀಲಂಕಾ ತಂಡದ ವಿರುದ್ಧ ಮೂರು ODI ಪಂದ್ಯಗಳನ್ನು ಆಡಲಿದೆ. ಅಷ್ಟೆ ಅಲ್ಲದೆ ಮೂರು T20 ಪಂದ್ಯಗಳನ್ನು ಆಡಲಿದೆ.

ಗಂಭೀರ್‌ ಮಾರ್ಗದರ್ಶನ

2024 ರಲ್ಲಿ ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದ ಕೆಳಗೆ ಕೆಕೆಆರ್‌ ತಂಡ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿತ್ತು.

ಕೆಕೆಆರ್‌ ಆಟಗಾರರು

ಇದೀಗ ಗೌತಮ್‌ ಗಂಭೀರ್‌ ಟೀಂ ಇಂಡಿಯಾದ ಕೋಚ್‌ ಆಗಿರುವ ಕಾರಣ ಭವಿಷ್ಯದಲ್ಲಿ ಕೆಕೆಆರ್‌ನ ಕೆಲ ಆಟಗಾರರು ಇದರ ಉಪಯೋಗ ಪಡೆಯಬಹುದು.

ಅಂಗ್‌ಕ್ರಿಶ್ ರಘುವಂಶಿ

ಯುವ ಬಲಗೈ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಐಪಿಎಲ್ 2024 ರಲ್ಲಿ ಕೆಕೆಆರ್ ಫ್ರಾಂಚೈಸಿಯ ಭಾಗವಾಗಿದ್ದಾರೆ. ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಎಲ್ಲರನ್ನು ಆಕರ್ಷಿಸಿದ್ರು.

ವೈಭವ್ ಅರೋರಾ

ಈ ಪಟ್ಟಿಗೆ ಬಲಗೈ ವೇಗದ ಬೌಲರ್ ವೈಭವ್ ಅರೋರಾ ಕೂಡ ಸೇರಿದ್ದಾರೆ. ಕೆಕೆಆರ್‌ನ ಪ್ರಮುಖ ವೇಗದ ಬೌಲರ್‌ಗಳಲ್ಲಿ ವೈಭವ್‌ ಕೂಡ ಒಬ್ಬರು.

ಹರ್ಷಿತ್ ರಾಣಾ

ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ ಹರ್ಷಿತ್ ರಾಣಾ ತಮ್ಮ ವೇಗ ಮತ್ತು ಆಕ್ರಮಣಕಾರಿ ಆಟದಿಂದ ಸುದ್ದಿಯಲ್ಲಿದ್ದರು. ಪಂದ್ಯಾವಳಿಯಲ್ಲಿ ಅವರು 13 ಪಂದ್ಯಗಳಲ್ಲಿ 19 ವಿಕೆಟ್ ಕಬಳಿಸುವ ಮೂಲಕ ಬ್ಯಾಟರ್‌ಗಳ ಬೆವರಿಳಿಸಿದರು.

VIEW ALL

Read Next Story