ಚಂದ್ರಯಾನ -3 ಮತ್ತು ಅದಕ್ಕೂ ಮೊದಲು ಭಾರತ ಕೈಗೊಂಡ ಲೂನಾರ್ ಮಿಷನ್ ಮೇಲೆ ಭಾರತ ಮಾಡಿದ ವೆಚ್ಚ ಎಷ್ಟು ನಿಮಗೆ ತಿಳಿದಿದೆಯಾ?
ಭಾರತದ ಚಂದ್ರಯಾನ 3, ಚಂದ್ರಯಾನ 2 ಕ್ಕಿಂತ ಕಡಿಮೆ ವೆಚ್ಚದ್ದಾಗಿದೆ.
ಜುಲೈ 14, 2023 ರಂದು ಭಾರತದ ಚಂದ್ರಯಾನ್ 3 ಮಿಷನ್ ತನ್ನ ಯಾತ್ರೆ ಆರಂಭಿಸಿತ್ತು. ಇಸ್ರೋ ಮಾಜಿ ಚೆರ್ಮನ್ ಕೆ. ಶಿವನ್ ಅವರ ಪ್ರಕಾರ ಈ ಮಿಷನ್ ನ ಅಪ್ರೂವ್ದ್ ಕಾಸ್ಟ್ 250 ಕೋಟಿ ರೂ.ಗಳಾಗಿದೆ.
ಆದರೆ ಈ ವೆಚ್ಚದಲ್ಲಿ ಲಾಂಚ್ ವೆಹಿಕಲ್ ಬೆಲೆ ಶಾಮಿಲಾಗಿಲ್ಲ. ಆದರೆ ಲ್ಯಾಂಡ್ ರೋವರ್ ಹಾಗೂ ಪ್ರೋಪಲ್ಷನ್ ಮಾಡ್ಯೂಲ್ ವೆಚ್ಚ ಶಾಮೀಲಾಗಿದೆ.
ಇದಲ್ಲದೆ ಉಡಾವಣಾ ಸೇವಾ ವೆಚ್ಚ 365 ಕೋಟಿಗಳಷ್ಟಾಗಿತ್ತು. ಹೀಗಿರುವಾಗ ಸಂಪೂರ್ಣ ಮಿಷನ್ ವೆಚ್ಚ ರೂ.615 ಕೋಟಿಗಳು ಎಂದರೆ ಸರಿ. ಅಮೆರಿಕಾದ ಡಾಲರ್ ಲೆಕ್ಕಾಚಾರದಲ್ಲಿ ಇದು ಸುಮಾರು 75 ಮಿಲಿಯನ್ ಡಾಲರ್ ಹತ್ತಿರಕ್ಕೆ ಎಂದರೆ ತಪ್ಪಾಗಲಾರದು.
ಚಂದ್ರಯಾನ್ 2 ಭಾರತದ ಅತ್ಯಂತ ದುಬಾರಿ ಲೂನಾರ್ ಮಿಷನ್ ಆಗಿದೆ. ಆದರೆ, ಅದು ತನ್ನ ನಿಗದಿತ ಗುರಿ ತಲುಪಲು ವಿಫಲವಾಗಿತ್ತು.
ಮಾಹಿತಿಯೊಂದರ ಪ್ರಕಾರ ಮಿಷನ್ ನಲ್ಲಿ ಲ್ಯಾಂಡರ್, ಆರ್ಬೀಟರ್ ರೋವರ್, ನ್ಯಾವಿಗೇಶನ್ ಹಾಗೂ ಗ್ರೌಂಡ್ ಸಪೋರ್ಟ್ ನೆಟ್ವರ್ಕ್ ವೆಚ್ಚ ಸುಮಾರು 603 ಕೋಟಿಗಳಷ್ಟಾಗಿದೆ.
ಅದರ ಜಿಯೋ-ಸ್ಟೇಷನರಿ ಸೆಟಲೈಟ್ ಲಾಂಚ್ ವೆಹಿಕಲ್ ವೆಚ್ಚ ಸುಮಾರು 375 ಕೋಟಿ ರೂ.ಗಲಾಗಿತ್ತು. ಇದರಿಂದ ಚಂದ್ರಯಾನ್ 2ರ ಒಟ್ಟು ಬಜೆಟ್ 978 ಕೋಟಿಗೆ ತಲುಪಿತ್ತು.
ಚಂದ್ರಯಾನ್ 1 ಭಾರತದ ಮೊಟ್ಟಮೊದಲ ಲೂನಾರ್ ಪ್ರೋಬ್ ಆಗಿತ್ತು. ಅದನ್ನು ಅಕ್ಟೋಬರ್ 2008ರಲ್ಲಿ ಲಾಂಚ್ ಮಾಡಲಾಗಿತ್ತು. ಅದು ಆಗಸ್ಟ್ 2009ರವರೆಗೆ ಕಾರ್ಯನಿರ್ವಹಿಸಿತ್ತು.
ಚಂದ್ರಯಾನ್ 1ರ ಅಂದಾಜು ವೆಚ್ಚ 386 ಕೋಟಿ ರೂ.ಗಳಷ್ಟಾಗಿತ್ತು. ಅಂದರೆ ಸರಿಸುಮಾರು 48 ಮಿಲಿಯನ್ ಡಾಲರ್. ಅಂದರೆ ಒಟ್ಟಾರೆಯಾಗಿ ಭಾರತ ಇದುವರೆಗೆ ಚಂದ್ರಯಾನ ಮಿಷನ್ ಮೇಲೆ ಸುಮಾರು 2000 ಕೋಟಿಗಳಷ್ಟು ವೆಚ್ಚ ಮಾಡಿದೆ.