Anshul Kamboj: ಮುಂಬೈ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡಿದ ಅಂಶುಲ್ ಕಾಂಬೋಜ್ ಯಾರು? RCB ಗೂ ಈತನಿಗೂ ಇದೆ ನಂಟು!!

 Who Is Anshul kamboj: ಮುಂಬೈ ಇಂಡಿಯನ್ಸ್ ಐಪಿಎಲ್ 2024 ರಲ್ಲಿ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಅಂಶುಲ್ ಕಾಂಬೋಜ್‌ಗೆ ಪಾದಾರ್ಪಣೆ ಮಾಡುವ ಅವಕಾಶವನ್ನು ನೀಡಿತ್ತು.. 

Written by - Savita M B | Last Updated : May 7, 2024, 12:00 PM IST
  • ಹರಿಯಾಣ ಪರ ಆಡುತ್ತಿರುವ ವೇಗದ ಬೌಲರ್ ಅಂಶುಲ್ ಕಾಂಬೋಜ್‌
  • ಅಂಶುಲ್ ಕಾಂಬೋಜ್‌ಗೆ ಮುಂಬೈ ಇಂಡಿಯನ್ಸ್ ಪದಾರ್ಪಣೆ ಮಾಡಲು ಅವಕಾಶ ನೀಡಿದೆ.
Anshul Kamboj: ಮುಂಬೈ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡಿದ ಅಂಶುಲ್ ಕಾಂಬೋಜ್ ಯಾರು? RCB ಗೂ ಈತನಿಗೂ ಇದೆ ನಂಟು!! title=

Anshul kamboj: ಐಪಿಎಲ್ 2024 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹರಿಯಾಣ ಪರ ಆಡುತ್ತಿರುವ ವೇಗದ ಬೌಲರ್ ಅಂಶುಲ್ ಕಾಂಬೋಜ್‌ಗೆ ಮುಂಬೈ ಇಂಡಿಯನ್ಸ್ ಪದಾರ್ಪಣೆ ಮಾಡಲು ಅವಕಾಶ ನೀಡಿದೆ. ಐಪಿಎಲ್ 2024 ರ ಹರಾಜಿನಲ್ಲಿ ಅಂಶುಲ್ ಅವರನ್ನು ಅವರ ಮೂಲ ಬೆಲೆ 20 ಲಕ್ಷಕ್ಕೆ MI ಖರೀದಿಸಿತು. ಇವರು ಬಲಗೈ ವೇಗದ ಬೌಲರ್ ಆಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಹರಿಯಾಣ ಪರ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿ 2023ರಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು.. ಬಹುಶಃ ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ಅವರಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಅವಕಾಶವನ್ನು ನೀಡಿದೆ.

ಇದನ್ನೂ ಓದಿ-IPL 2024: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯಾರ್ಯಾರಿದ್ದಾರೆ? ಅಗ್ರಸ್ಥಾನದಲ್ಲಿರೋದು ಈ RCB ಆಟಗಾರ!!

ಅಂಶುಲ್ ಕಾಂಬೋಜ್ ಡಿಸೆಂಬರ್ 6, 2000 ರಂದು ಹರಿಯಾಣದ ಕರ್ನಾಲ್‌ನಲ್ಲಿ ಜನಿಸಿದರು. ಇವರು ಫೆಬ್ರವರಿ 2022 ರಲ್ಲಿ ಹರಿಯಾಣಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂಶುಲ್ ವೃತ್ತಿಜೀವನದಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಿದ್ದಾರೆ, 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಬ್ಯಾಟಿಂಗ್‌ನಲ್ಲಿ 284 ರನ್ ಗಳಿಸಿದ್ದಾರೆ. ಚೊಚ್ಚಲ ಪ್ರವೇಶದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಂಶುಲ್‌  ‌ಅಕ್ಟೋಬರ್ 2022ರಲ್ಲಿ ಹರಿಯಾಣ ಪರ T20 ಚೊಚ್ಚಲ ಪ್ರವೇಶ ಮಾಡಿ, ತಮ್ಮ T20 ವೃತ್ತಿಜೀವನದಲ್ಲಿ 9 ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ-ಪಂಜಾಬ್ ವೇಗಿ ಹರ್ಷಲ್ ಪಟೇಲ್ ಯಾರ್ಕರ್’ಗೆ ಧೋನಿ ಗೋಲ್ಡನ್ ಡಕ್! ಅರೆಕ್ಷಣ ಅಚ್ಚರಿಗೊಳಗಾದ ಫ್ಯಾನ್ಸ್

ಅಂಶುಲ್‌ ಕಾಂಬೋಜ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಹರಿಯಾಣ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದರು. ಈ ಋತುವಿನಲ್ಲಿ ಆಡಿದ 10 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಈ 10 ಪಂದ್ಯಗಳಲ್ಲಿ ಅವರ ಸ್ಟ್ರೈಕ್‌ ರೇಟ್ ಕೇವಲ 3.58 ಆಗಿತ್ತು. ಇವರ ಈವರೆಗಿನ ಪ್ರದರ್ಶನವು ಐಪಿಎಲ್ ಫ್ರಾಂಚೈಸಿಯನ್ನು ಆಕರ್ಷಿಸುವಷ್ಟು ಉತ್ತಮವಾಗಿತ್ತು.. ಹೀಗಾಗಿ ಐಪಿಎಲ್ 2024 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 20 ಲಕ್ಷಕ್ಕೆ ಅಂಶುಲ್ ಕಾಂಬೋಜ್ ಅವರನ್ನು ಖರೀದಿಸಿತ್ತು..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News