ನಟಿ ಮಾಳವಿಕಾ ಮೋಹನನ್ ಅತ್ಯಂತ ಕಡಿಮೆ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಪ್ರಮುಖ ನಟಿಯರ ಪಟ್ಟಿ ಸೇರಿದರು.
ಮಾಳವಿಕಾ ಈಗಾಗಲೇ ನಟ ವಿಜಯ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಮಲ್ಲು ಸುಂದರಿ ಮಾಳವಿಕಾ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
ಇನ್‌ಸ್ಟಾದಲ್ಲಿ ಮಾಳವಿಕಾ ಹಂಚಿಕೊಳ್ಳುವ ಎಲ್ಲಾ ಚಿತ್ರಗಳು ಬಹುಬೇಗ ವೈರಲ್ ಆಗುತ್ತವೆ.
ಮಲಯಾಳಿ ನಟಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಆಗಾಗ್ಗೆ ಗ್ಲಾಮರಸ್ ಫೋಟೋಶೂಟ್‌ಗಳಿಂದ ಗಮನಸೆಳೆಯುತ್ತಿರುತ್ತಾರೆ.
ಸಧ್ಯ ಮಾಳವಿಕಾ ಹಂಚಿಕೊಂಡಿರುವ ಹೊಸ ಫೋಟೋಸ್ ಇಂಟರ್‌ನೆಟ್‌ನಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿವೆ.
ಮಾಳವಿಕಾ ಬಿಳಿ ಸೀರೆಯುಟ್ಟು ನೀರಲ್ಲಿ ಮಿಂದೆದ್ದ ರಾಜಹಂಸದಂತೆ ಸುಂದರವಾಗಿ ಕಾಣುತ್ತಿದ್ದಾರೆ.
ನಟಿ ಮಾಳವಿಕಾ ಮೋಹನನ್ ಅವರು ಕೊನೆಯದಾಗಿ ಕ್ರಿಸ್ಟಿ ಸಿನಿಮಾದಲ್ಲಿ ನಟಿಸಿದ್ದರು.