ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗಿದ್ದರೆ ಪಾದಗಳಲ್ಲಿ ಕಂಡುಬರುತ್ತೆ ಈ ಲಕ್ಷಣಗಳು

ಎಂದರೇನು?

ದೇಹದಲ್ಲಿ ಉತ್ಪತ್ತಿಯಾಗುವ ಯೂರಿಕ್ ಆಮ್ಲವು ಪ್ಯೂರಿನ್ ಎಂಬ ವಸ್ತುವಿನ ವಿಭಜನೆಯಿಂದ ರೂಪುಗೊಳ್ಳುವ ರಾಸಾಯನಿಕವಾಗಿದೆ. ಇದು ಆರೋಗ್ಯಕ್ಕೆ ಅಗತ್ಯವೇ. ಆದರೆ ಈ ಆಮ್ಲ ದೇಹದಲ್ಲಿ ಎಷ್ಟರ ಪ್ರಮಾಣದಲ್ಲಿದೆ ಎಂಬುದರ ಮೇಲೆ ಇದು ಒಳ್ಳೆಯದೋ ಅಥವಾ ಅಪಾಯಕಾರಿಯೋ ಎಂಬುದು ಅವಲಂಬಿತವಾಗಿರುತ್ತದೆ.

ಅಪಾಯ

ಯೂರಿಕ್ ಆಮ್ಲದ ಪ್ರಮಾಣವು ಅಧಿಕವಾಗಿದ್ದರೆ ಮೂತ್ರಪಿಂಡದ ಕಲ್ಲುಗಳು ಮತ್ತು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.

ವರದಿ

ಕೆಲವು ಅಧ್ಯಯನಗಳಲ್ಲಿ, ಇದು ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯ, ಮೆಟಾಬಾಲಿಕ್ ಸಿಂಡ್ರೋಮ್‌ʼಗೆ ಕೂಡ ಕಾರಣವಾಗುತ್ತದೆ. ಇವುಗಳು ವ್ಯಕ್ತಿಯ ಮಧುಮೇಹ ಮತ್ತು ಪಾರ್ಶ್ವವಾಯು ಸಾಧ್ಯತೆಯನ್ನು ಹೆಚ್ಚಿಸುವ ಕೆಲವು ಅಂಶಗಳಾಗಿವೆ.

ಪ್ರಮಾಣ ಎಷ್ಟು?

Arthritis Foundation ಪ್ರಕಾರ, ಯೂರಿಕ್ ಆಮ್ಲವು ಪುರುಷರಲ್ಲಿ 7 ಮಿಲಿಗ್ರಾಂ ಪ್ರತಿ ಡೆಸಿಲಿಟರ್ (mg/dL) ಮತ್ತು ಮಹಿಳೆಯರಲ್ಲಿ 6 mg/dL ಅನ್ನು ಮೀರಿದಾಗ ಎಚ್ಚರ ವಹಿಸಬೇಕಾಗುತ್ತದೆ.

ಲಕ್ಷಣಗಳು

ಇನ್ನು ಕಾಲ್ಬೆರಳುಗಳಲ್ಲಿ ಚುಚ್ಚುವ ನೋವು, ಹೆಬ್ಬೆರಳಿನಲ್ಲಿ ಊತ, ಹಿಮ್ಮಡಿಯವರೆಗೆ ನೋವು, ಬೆಳಿಗ್ಗೆ ಪಾದದ ಅಡಿಭಾಗದಲ್ಲಿ ತೀವ್ರವಾದ ನೋವು, ಮೊಣಕಾಲು ನೋವು ಇವೆಲ್ಲವೂ ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು.

ಲಕ್ಷಣಗಳು

ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದಾಗ ನೋವು, ಕೀಲುಗಳಲ್ಲಿ ಬಿಗಿತ, ಸುತ್ತಲಿನ ಚರ್ಮ ಕೆಂಪಾಗುವುದು, ಮೂತ್ರದಲ್ಲಿ ರಕ್ತ ಬರುವುದು, ಪದೇ ಪದೇ ಮೂತ್ರ ವಿಸರ್ಜನೆ, ಸುಸ್ತು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸೂಚನೆ

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ಪರಿಣಿತರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ

VIEW ALL

Read Next Story