Rajasthan Election Results 2023: ಕಾಂಗ್ರೆಸ್ ಗೆದ್ದರೆ... ರಾಜಸ್ಥಾನದ ಮುಖ್ಯಮಂತ್ರಿ ಯಾರು?
Rajasthan Election Results 2023: ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಗಾದಿ ಅಲಂಕರಿಸುವವರು ಯಾರು? ಮುಖ್ಯಮಂತ್ರಿ ರೇಸ್ನಲ್ಲಿರುವ ಐವರು ಕಾಂಗ್ರೆಸ್ ನಾಯಕರ ಬಗ್ಗೆ ಇಲ್ಲಿ ತಿಳಿಯೋಣ.
Rajasthan Election Results 2023: ರಾಜಸ್ಥಾನದ ಚುನಾವಣಾ ಕದನದಲ್ಲಿ ಸರ್ಕಾರ ಬದಲಾಗಲಿದೆಯೇ ಅಥವಾ ಕಾಂಗ್ರೆಸ್ ಪಕ್ಷ ಮತ್ತೆ ಸರ್ಕಾರ ರಚಿಸುವ ಮೂಲಕ ಇತಿಹಾಸ ನಿರ್ಮಿಸಲಿದೆಯೇ? ಈ ಪ್ರಶ್ನೆಗೆ ಇಂದು ಸಂಜೆಯೊಳಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಗುರುವಾರ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಸುಮಾರು 96 ಸ್ಥಾನಗಳನ್ನು, ಬಿಜೆಪಿ 90 ಸ್ಥಾನಗಳನ್ನು ಮತ್ತು ಇತರ ಪಕ್ಷಗಳು 13 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿವೆ.
ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಕುರ್ಚಿಯನ್ನು ಯಾರು ಅಲಂಕರಿಸುತ್ತಾರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಯೋಜನೆಗಳ ಆಧಾರದ ಮೇಲೆ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆದರೆ ಕಾಂಗ್ರೆಸ್ ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮೂಡಿದೆ. ಮುಖ್ಯಮಂತ್ರಿಯಾಗಬಲ್ಲ ಐವರು ಕಾಂಗ್ರೆಸ್ ನಾಯಕರ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: Rajasthan Election Result 2023: ಗೆಹ್ಲೋಟ್, ಪೈಲಟ್ ಮತ್ತು ವಸುಂಧರಾ ರಾಜೆಗೆ ಆರಂಭಿಕ ಮುನ್ನಡೆ
ಅಶೋಕ್ ಗೆಹ್ಲೋಟ್ : ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಪ್ರಬಲ ಆಕಾಂಕ್ಷಿಯಾಗಲಿದ್ದಾರೆ. ಏಕೆಂದರೆ ಅವರ ಯೋಜನೆಗಳ ಆಧಾರದಲ್ಲಿಯೇ ಕಾಂಗ್ರೆಸ್ ಚುನಾವಣಾ ಕಣಕ್ಕೆ ಇಳಿದು ಪ್ರಬಲ ಹೋರಾಟ ನಡೆಸಿತ್ತು. ಅಶೋಕ್ ಗೆಹ್ಲೋಟ್ ಅವರು 1998 ರಿಂದ 2003, 2008 ರಿಂದ 2013 ಮತ್ತು 2018 ರಿಂದ 2023 ರವರೆಗೆ ಮುಖ್ಯಮಂತ್ರಿಯಾಗಿದ್ದಾರೆ. ಇದಲ್ಲದೇ ಕೇಂದ್ರ ಸಚಿವ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಅವರನ್ನು ರಾಜಕೀಯದ ಮಾಂತ್ರಿಕ ಎಂದು ಕರೆಯಲಾಗುತ್ತದೆ. ಗೆಹ್ಲೋಟ್ ಅವರ ಮನಸ್ಸಿನಲ್ಲಿ ಯಾವ ಯೋಜನೆ ಚಾಲನೆಯಲ್ಲಿದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
ಸಚಿನ್ ಪೈಲಟ್ : ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಎರಡನೇ ದೊಡ್ಡ ಹೆಸರು ಸಚಿನ್ ಪೈಲಟ್. ಸಚಿನ್ ಪೈಲಟ್ ಅವರು 2018 ರಲ್ಲೂ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು, ಆದರೂ ಅವರು ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಡಬೇಕಾಯಿತು. ಚಿಕ್ಕ ವಯಸ್ಸಿನಲ್ಲೇ ಸಂಸದರಾದ ದಾಖಲೆಯನ್ನೂ ಪೈಲಟ್ ಹೊಂದಿದ್ದಾರೆ. ಇದಲ್ಲದೇ 2013ರ ಹೀನಾಯ ಸೋಲಿನ ನಂತರ ಪಕ್ಷ ಮತ್ತು ಸಂಘಟನೆಯನ್ನು ಪುನಶ್ಚೇತನಗೊಳಿಸುವಲ್ಲಿ ಸಚಿನ್ ಪೈಲಟ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಗೋವಿಂದ್ ಸಿಂಗ್ ದೋತಾಸ್ರಾ : ಗೋವಿಂದ್ ಸಿಂಗ್ ದೋತಾಸ್ರಾ ನಿರಂತರವಾಗಿ ಸುದ್ದಿಯಲ್ಲಿದ್ದರು. ಆ ನಂತರ ರಾಜ್ಯಾಧ್ಯಕ್ಷರಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದರು.ಗೆಹ್ಲೋಟ್ ಮತ್ತು ಪೈಲಟ್ ನಡುವಿನ ರಾಜಕೀಯ ಜಗಳದ ನಂತರ ಅವರಿಗೆ ಪ್ರಮುಖ ಹುದ್ದೆಯನ್ನು ನೀಡಲಾಯಿತು. ಜಾಟ್ ಸಮುದಾಯದಿಂದ ಬಂದಿರುವ ಇವರು ಕೂಡ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಆಕಾಂಕ್ಷಿ ಎಂದು ಪರಿಗಣಿಸಲಾಗಿದೆ.
ಸಿಪಿ ಜೋಶಿ : ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಕೂಡ ರಾಜ್ಯ ರಾಜಕಾರಣದಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ. 2008 ರ ವಿಧಾನಸಭಾ ಚುನಾವಣೆಯಲ್ಲಿ, ಜೋಶಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ ಅವರು ಚುನಾವಣೆಯಲ್ಲಿ ಒಂದು ಮತದ ಅಂತರದಿಂದ ಸೋತರು. ಮತ್ತೆ ರಾಜಸ್ಥಾನ ರಾಜ್ಯದಲ್ಲಿ ಸಿ.ಪಿ.ಜೋಶಿ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಗೋವಿಂದ್ ರಾಮ್ ಮೇಘವಾಲ್ : ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಸಚಿವರಾಗಿದ್ದ ಗೋವಿಂದ್ ರಾಮ್ ಮೇಘವಾಲ್ ಅವರನ್ನು ಕಾಂಗ್ರೆಸ್ ತನ್ನ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತು. ದಲಿತ ಸಮುದಾಯಕ್ಕೆ ಸೇರಿದ ಮೇಘವಾಲ್ ಅವರಿಗೆ ಇತ್ತೀಚೆಗೆ ಪಕ್ಷ ಮತ್ತು ಸಂಘಟನೆಯಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗಿದೆ. ಪಂಜಾಬ್‌ನಲ್ಲಿರುವಂತೆ, ಕೆಲವು ರಾಜಕೀಯ ಪಂಡಿತರು ಗೋವಿಂದ್ ರಾಮ್ ಮಾಘವಾಲ್ ರೂಪದಲ್ಲಿ ಕಾಂಗ್ರೆಸ್ ದೊಡ್ಡ ದಲಿತ ಕಾರ್ಡ್ ಅನ್ನು ಹೊಂದಿದ್ದು, ಅವರನ್ನು ರಾಜ್ಯ ಕಾಂಗ್ರೆಸ್ ಪಕ್ಷವು ಚಾತುರ್ಯದ ರೀತಿಯಲ್ಲಿ ಬಳಸುತ್ತದೆ ಎಂದು ಹೇಳುತ್ತಾರೆ. ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: Assembly Election Results 2023 : ಇಂದು 4 ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.