Veera Kambala: ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ. ಈ ಕಂಬಳದ ಕುರಿತು "ವೀರ ಕಂಬಳ" ಎಂಬ ಚಿತ್ರವನ್ನು ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ.
ಹನ್ಸಲ್ ಮೆಹ್ತಾ ಮತ್ತು ಸಫೀನಾ ಅವರೊಂದಿಗಿನ ಈ ಮದುವೆಯ ಫೋಟೋಗಳು ವೈರಲ್ ಆಗಿದ್ದು. ಇದೀಗ ಈ ಜೋಡಿಯ ಮದುವೆಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ಇವರಿಬ್ಬರ ಮದುವೆಗೆ ಶುಭ ಹಾರೈಸುತ್ತಿದ್ದರೆ. ಈ ಪೋಸ್ಟ್‌ಗೆ ಎಲ್ಲಾ ಸೆಲೆಬ್ರಿಟಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.
Aishwarya Rai: ಐಶ್ವರ್ಯಾ ರೈ ಬಚ್ಚನ್ ಅವರ ಮಾಡೆಲಿಂಗ್ ದಿನಗಳ ಬಗ್ಗೆ ಒಂದು ಅಚ್ಚರಿಯ ಸುದ್ದಿ ಇಲ್ಲಿದೆ. ರೆಡ್ಡಿಟ್ ಬಳಕೆದಾರರು ಹಂಚಿಕೊಂಡ ಬಿಲ್‌ನ ಪ್ರತಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದರಲ್ಲಿ 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಇದೆ.
"ವೀರ ಮದಕರಿ" ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ "ಸಾರಿ" (ಕರ್ಮ ರಿಟರ್ನ್ಸ್).
Vasishta Simha: ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು, ಮತ್ತೊಂದು ಕೈಯಲ್ಲಿ ಧಮ್ ಎಳೆಯುತ್ತಾ, ರಾ ಲುಕ್ ನಲ್ಲಿ ವಸಿಷ್ಠ ಸಿಂಹ ಎಂಟ್ರಿ ಕೊಟ್ಟಿದ್ದು, ಈ ಪೋಸ್ಟರ್ ಗೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ.
ಹಿಂದಿಯಲ್ಲಿ ‘ವಿಕ್ರಾಂತ್ ರೋಣ’ ರಿಲೀಸ್ ಮಾಡುವ ಜವಾಬ್ದಾರಿಯನ್ನ ನಟ ಸಲ್ಮಾನ್ ಖಾನ್ ಅವರೇ ಹೊತ್ತಿದ್ದಾರೆ. ಈ ಮೂಲಕ ಹೊಸ ಸಂಚಲನ ಸೃಷ್ಟಿಯಾಗಿದ್ದು ‘ವಿಕ್ರಾಂತ್ ರೋಣ’ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ.
ವರದಕ್ಷಿಣೆ ಸಾಮಾಜಿಕ ಪಿಡುಗು ಎಂಬುದು ಎಲ್ಲರಿಗೂ ತಿಳಿದ ವಿಚಾರ. ವರದಕ್ಷಿಣೆಯನ್ನು ಪಡೆಯುವುದು ಮತ್ತು ಕೊಡುವುದು ಎರಡೂ ಅಪರಾಧವೇ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು. ಅಷ್ಟೇ ಅಲ್ಲದೆ, ಈ ಸಂಬಂಧ ಸಾಮಾಜಿಕ ಕಳಕಳಿಯನ್ನೂ ಸಹ ಮೂಡಿಸಲಾಗುತ್ತಿದೆ. ಆದರೆ ದಕ್ಷಿಣ ಭಾರತದ ಖ್ಯಾತ ನಟ ತಮ್ಮ ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಪಡೆದಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಜೇನುಗೂಡು ಸಿನಿಮಾ ಬ್ಯಾನರ್‌ನಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿರುವ ‘ವಾಸಂತಿ ನಲಿದಾಗ ಸಿನಿಮಾ’ದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಬಸ್ ಡ್ರೈವರ್ ರೊಬ್ಬನ ಮಗನಾಗಿ ಸಾಮಾನ್ಯ ಕುಟುಂಬದಿಂದ ಬಂದಂತಹ ಯಶ್ ಈಗ ದೇಶಾದ್ಯಂತ ರಾಕಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.ಆದರೆ ಅವರ ಸಿನಿ ಜರ್ನಿ ಮಾತ್ರ ಅಷ್ಟು ಸಲಿಸಾಗಿರಲಿಲ್ಲ, ಆರಂಭದಲ್ಲಿ ರಂಗಭೂಮಿಯಲ್ಲಿ ಬ್ಯಾಕ್ ಗ್ರೌಂಡ್ ಕೆಲಸ ಮಾಡುತ್ತಲೇ ಕಿರುತೆರೆಗೆ ಪ್ರವೇಶಿಸಿ ಮುಂದೆ ಬೆಳ್ಳಿ ತೆರೆಯಲ್ಲಿಯೂ ಕೂಡ ಸೈ ಎನಿಸಿಕೊಂಡವರು.
Vikrant Rona: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆ ಮೇಲೆ ಕಿಚ್ಚನ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದಾರೆ.
ಕನ್ನಡದ ರಾಜರತ್ನ... ಅಭಿಮಾನಿಗಳ ಪಾಲಿನ ಯುವರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ತುರ್ತು ನಿರ್ಗಮನ ಸಿನಿಮಾ ತಂಡ ಗಾನ ನಮನ ಸಲ್ಲಿಸಿದೆ. ಅಪ್ಪು ಗುಣಗಾನ ಮಾಡುವ ಜೀವ ಎಂಬ ಗೀತೆಯನ್ನು ಅನಾವರಣ ಮಾಡಿದೆ.
ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ, ಗುಡ್ ಗುಡ್ಡರ್ ಗುಡೆಸ್ಟ್ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ನಿನ್ನೆ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಮುಹೂರ್ತ ನೆರವೇರಿದ್ದು, ಜೀ ಕನ್ನಡದ ಡಿಕೆಡಿ ಶೋ ವಿನ್ನರ್ ಚೈತ್ರಾಲಿ ಕ್ಲ್ಯಾಪ್ ಮಾಡಿದ್ರೆ, ಬೂಸೆ ಗೌಡ ಎಂಬ ಭರತನಾಟ್ಯದಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ಅಂಧರೊಬ್ಬರು ಕ್ಯಾಮೆರಾಗೆ ಚಾಲನೆ ನೀಡಿದರು.
ಮಹಿಳೆಯು ತಾನು ಧರಿಸಿದ್ದ ಉಡುಪಿನ ಮೇಲೆ "ನಮ್ಮ ಮೇಲೆ ಅತ್ಯಾಚಾರ ಎಸಗುವುದನ್ನು ನಿಲ್ಲಿಸಿ(Stop Raping Us)" ಎಂದು ಉಕ್ರೇನಿಯನ್ ದೇಶದ ಧ್ವಜದ ಬಣ್ಣಗಳಲ್ಲಿ ಬರೆದಿದ್ದಾರೆ. ಕೆಂಪು ಬಣ್ಣದ ಟಾಪ್‌ಲೆಸ್ ಉಡುಪು ಧರಿಸಿದ್ದ ಆಕೆ ಕಿರುಚುತ್ತಾ ಫೋಟೋಗ್ರಾಪರ್‌ಗಳ ಬಳಿಗೆ ಓಡಿ ಬಂದಿದ್ದಾರೆ.
ರಾಮಾರ್ಜುನ ಸಿನಿಮಾದ ನಂತರ ಅನೀಶ್ ತೇಜೇಶ್ವರ್ ನಟಿಸ್ತಿರುವ ಬೆಂಕಿ ಸಿನಿಮಾದ ಸೋಲ್ ಆಫ್ ಬೆಂಕಿ ಹಾಡು ಬಿಡುಗಡೆಯಾಗಿದೆ. ಅಣ್ಣ-ತಂಗಿಯ ನಡುವಿನ ಬಾಂಧವ್ಯದ ಈ ಗೀತೆಗೆ ನಟಿ ಚೈತ್ರಾ ಆಚಾರ್ ಧನ್ವಿಯಾಗಿದ್ದಾರೆ.
ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ನೋಡುವಂತಹ "ಕೆಜಿಎಫ್ ೨"ನಂತಹ ಬಿಗ್ ಹಿಟ್ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರ್ ನಿರ್ಮಾಣದ "ಬಘೀರ" ಚಿತ್ರಕ್ಕೆ ಚಾಲನೆ ದೊರಕಿದೆ.