Assembly Election Results 2023 : ಚುನಾವಣೆ ನಡೆದ 5 ರಾಜ್ಯಗಳ ಪೈಕಿ ಇಂದು ಮಿಜೋರಾಂ ಹೊರತುಪಡಿಸಿ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು, 03 ಡಿಸೆಂಬರ್ 2023 ರಂದು ಪ್ರಕಟಗೊಳ್ಳಲಿದೆ. ಇಂದು 4 ರಾಜ್ಯಗಳವಿಧಾನಸಭೆ ಚುನಾವಣಾ ಫಲಿತಾಂಶ ಮಾತ್ರ ಹೊರ ಬೀಳಲಿದೆ. ಮಿಜೋರಾಂ ರಾಜ್ಯದಲ್ಲಿ ನಾಳೆ, 04‌ ಡಿಸೆಂಬರ್ 2023 ಮತ ಎಣಿಕೆಯಾಗಲಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಯಾರು ಗೊತ್ತಾ? 


ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಒಂದೇ ಹಂತದಲ್ಲಿ ನಡೆದಿತ್ತು. ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಸಲಾಗಿತ್ತು. ನವೆಂಬರ್‌ 25 ರಂದು ರಾಜಸ್ಥಾನದಲ್ಲಿ 200 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ನವೆಂಬರ್‌ 30 ರಂದು ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ನವೆಂಬರ್‌ 07 ಮತ್ತು 17 ರಂದು ಎರಡು ಹಂತದಲ್ಲಿ ಛತ್ತೀಸ್‌ಗಢದಲ್ಲಿ 90 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ನವೆಂಬರ್‌ 07 ರಂದು ಮಿಜೋರಾಂನಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 


ಚುನಾವಣಾ ಫಲಿತಾಂಶ 2023: ದಿನಾಂಕ


ಮಿಜೋರಾಂನ ಚುನಾವಣಾ ಫಲಿತಾಂಶಗಳನ್ನು ಸೋಮವಾರ, 4 ಡಿಸೆಂಬರ್ 2023 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ. ಮೊದಲು, ಫಲಿತಾಂಶಗಳನ್ನು ಡಿಸೆಂಬರ್ 3 ರಂದು ಪ್ರಕಟಿಸಬೇಕಿತ್ತು, ಆದರೆ ದಿನಾಂಕವನ್ನು ಮುಂದೂಡಲಾಯಿತು.


ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ವೇಳಾಪಟ್ಟಿಯ ಪ್ರಕಾರ ಡಿಸೆಂಬರ್ 3 ಭಾನುವಾರದಂದು ಪ್ರಕಟಿಸಲಾಗುವುದು.


ಚುನಾವಣಾ ಫಲಿತಾಂಶಗಳು 2023: ಸಮಯ


ಮಿಜೋರಾಂ ಚುನಾವಣಾ ಫಲಿತಾಂಶ 2023 ಡಿಸೆಂಬರ್ 4 ಸೋಮವಾರ ಬೆಳಗ್ಗೆ 8 ಗಂಟೆಯ ನಂತರ ಪ್ರಕಟವಾಗುವ ನಿರೀಕ್ಷೆಯಿದೆ.  


ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣಾ ಫಲಿತಾಂಶಗಳು ಸಹ ಬೆಳಿಗ್ಗೆ 8 ಗಂಟೆಯ ನಂತರ ಪ್ರಕಟಗೊಳ್ಳಲಿವೆ.  


ಇದನ್ನೂ ಓದಿ: ಟ್ರೀಪ್‌ ಪ್ಲಾನ್‌ ಮಾಡುವಾಗ ಈ ಟಾಪ್ 6 ಟೈಗರ್ ರಿಸರ್ವ್ ಸಫಾರಿ ಪಾರ್ಕ್‌ಗಳನ್ನೂ ಸೇರಿಸಿ..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.