Rajasthan Congress Manifesto: ರೈತರಿಗೆ ಬಡ್ಡಿ ರಹಿತ ಸಾಲ, 10 ಲಕ್ಷ ಉದ್ಯೋಗ ರಾಜಸ್ಥಾನದಲ್ಲಿ ಕಾಂಗ್ರೆಸ್ ಭರವಸೆ
Rajasthan Congress Manifesto: ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ರಾಜ್ಯದ ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಭರ್ಜರಿ ಘೋಷಣೆಗಳನ್ನು ಮಾಡಲಾಗಿದೆ.
Rajasthan Congress Manifesto: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ರಾಜಸ್ಥಾನದ ಪಕ್ಷದ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೋವಿಂಡ್ ಸಿಂಗ್ ದೋತಾಸ್ರಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಿಪಿ ಜೋತಿ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ 'ಜನ ಘೋಷಣಾ ಪತ್ರ'ವನ್ನು ಬಿಡುಗಡೆ ಮಾಡಿದರು.
ನವೆಂಬರ್ 25, 2023ರಂದು ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ರಾಜ್ಯದ ರೈತರು, ಯುವಕರು ಮತ್ತು ಮಹಿಳೆಯರಿಗೆ ದೊಡ್ಡ ಭರವಸೆಗಳನ್ನು ನೀಡಿದೆ.
ಇದನ್ನೂ ಓದಿ- ತಮಿಳುನಾಡಿನಿಂದ 34,300 ಕಿಮೀ ಸೈಕಲ್‌ಗಳನ್ನು ಓಡಿಸಿದ ಪುನೀತ್ ರಾಜ್‌ಕುಮಾರ್ ಫ್ಯಾನ್ : ನೆಚ್ಚಿನ ಸ್ಟಾರ್‌ಗೆ ಟ್ರಿಬ್ಯೂಟ್
ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಪ್ರಮುಖ ಭರವಸೆಗಳು ಈ ಕೆಳಕಂಡಂತಿವೆ:-
ಯುವಕರಿಗಾಗಿ ಪ್ರಣಾಳಿಕೆಯಲ್ಲಿ ಪ್ರಮುಖ ಭರವಸೆಗಳು:
* ಐದು ವರ್ಷಗಳಲ್ಲಿ 10 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿ. ಅದರಲ್ಲೂ 4 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗದ ಭರವಸೆ.
* ಪಂಚಾಯತ್ ಮಟ್ಟದಲ್ಲಿ ನೇಮಕಾತಿಗಾಗಿ ಹೊಸ ಯೋಜನೆಯನ್ನು ತರುತ್ತದೆ, ಇದರಲ್ಲಿ ಈ ನೌಕರರು ಕ್ರಮೇಣ ಸರ್ಕಾರಿ ಖಾಲಿ ಹುದ್ದೆಗಳೊಂದಿಗೆ ವಿಲೀನಗೊಳ್ಳುತ್ತಾರೆ.
* ನಿರುದ್ಯೋಗಿ ಯುವಕರ ಉದ್ಯೋಗ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು, ನಾವು 'ಟೋಲ್ ಫ್ರೀ ಕಾಲ್ ಸೆಂಟರ್' ಮತ್ತು 'ಇ-ಉದ್ಯೋಗ ವಿನಿಮಯ' ಸೌಲಭ್ಯವನ್ನು ಪ್ರಾರಂಭಿಸುತ್ತೇವೆ.
* MNREGA ಮತ್ತು ಇಂದಿರಾ ಗಾಂಧಿ ನಗರ ಉದ್ಯೋಗವನ್ನು 125 ರಿಂದ 150 ದಿನಗಳಿಗೆ ಹೆಚ್ಚಳ.
ಸ್ತ್ರೀಯರಿಗಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆಗಳು:
* ಪ್ರಸ್ತುತ 500ರೂ.ಗೆ ಲಭ್ಯವಿರುವ ಸಿಲಿಂಡರ್ 400 ರೂ.ಗೆ ಲಭ್ಯ.
ಉಜ್ವಲಾ, ಎನ್‌ಎಫ್‌ಎಸ್‌ಎ ಮತ್ತು ಬಿಪಿಎಲ್ ಕುಟುಂಬಗಳಿಗೆ ರೂ 400 ಮೌಲ್ಯದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನೀಡುವ ಮೂಲಕ ಹೆಚ್ಚಿನ ಪರಿಹಾರವನ್ನು ಒದಗಿಸುತ್ತೇವೆ.
* ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು, ನಾವು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
* ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಪ್ರತಿ ಗ್ರಾಮ ಮತ್ತು ನಗರ ವಾರ್ಡ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗುವುದು.
* ಅಸ್ತಿತ್ವದಲ್ಲಿರುವ ರಿಯಾಯಿತಿಯ ಜೊತೆಗೆ ರಾಜ್ಯ-ರಸ್ತೆಗಳ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಪ್ರತಿ ತಿಂಗಳು ಉಚಿತ ಕೂಪನ್.
ರೈತರಿಗಾಗಿ ಪ್ರಣಾಳಿಕೆಯಲ್ಲಿ ಏನಿದೆ?
* ಸ್ವಾಮಿನಾತನ್ ಸಮಿತಿ ಶಿಫಾರಸ್ಸಿನಂತೆ ರಾಜ್ಯದ ರೈತರಿಗೆ ಎಮ್‌ಎಸ್‌ಪಿ ಕಾನೂನು ಜಾರಿ.
* ಸಹಕಾರಿ ಬ್ಯಾಂಕ್‌ಗಳಿಂದ ಎಲ್ಲಾ ರೈತರಿಗೆ ರೂ 2 ಲಕ್ಷದವರೆಗೆ ಬಡ್ಡಿರಹಿತ ಕೃಷಿ ಸಾಲದ ಸೌಲಭ್ಯ.
ಇತರ ಪ್ರಮುಖ ಭರವಸೆಗಳು:
* ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್/ಟ್ಯಾಬ್ಲೆಟ್.
* ರಾಜ್ಯದಲ್ಲಿ ಆರ್‌ಟಿಇ ಕಾನೂನು ತರುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ 12ನೇತರಗತಿವರೆಗೆ ಉಚಿತ ಶಿಕ್ಷಣ.
* ಮರ್ಚೆಂಟ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿಕಾರರಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು.
* ಸರ್ಕಾರಿ ನೌಕರರಿಗೆ 9,18,27 ರೊಂದಿಗೆ ನಾಲ್ಕನೇ ವೇತನ ಶ್ರೇಣಿ ಮತ್ತು ಅಧಿಕಾರಿಗಳಿಗೆ ಅಪೆಕ್ಸ್ ಸ್ಕೇಲ್ ಭರವಸೆ.
* ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಕಾನೂನು.
* 100 ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳು/ಕುಗ್ರಾಮಗಳು ರಸ್ತೆಯ ಮೂಲಕ ಸಂಪರ್ಕಗೊಳ್ಳುತ್ತವೆ ಎಂಬಿತ್ಯಾದಿ ಭರವಸೆಗಳನ್ನು ನೀಡಲಾಗಿದೆ.
ಇದನ್ನೂ ಓದಿ- ಇನ್ಸ್ಟಾಗ್ರಾಮ್ ರೀಲ್ ಗಾಗಿ ನಡುರಸ್ತೆಯಲ್ಲಿ ಯೋಗ ಮಾಡುತ್ತಿದ್ದವಳಿಗೆ ಪೋಲಿಸರಿಂದ ಕಾನೂನು ಪಾಠ...!
ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನ ಕಾಂಗ್ರೆಸ್‌ನ ಭದ್ರಕೋಟೆ. ನಮ್ಮ ನಿಮ್ಮ ಸಂಬಂಧ ಇಂದು ನೆನ್ನೆಯದಲ್ಲ. ನಾವು 1926ರಲ್ಲಿ ಕೇಂದ್ರ ಅಸೆಂಬ್ಲಿಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ. ಒಂದು ಸರ್ಕಾರ ತನ್ನ ಪ್ರಣಾಳಿಕೆಯ ಶೇಕಡ 90 ರಷ್ಟು ಭರವಸೆಗಳನ್ನು ಈಡೇರಿಸಿದರೆ ಅದು ದೊಡ್ಡ ವಿಷಯ. ನಾವು ಯಾವುದೇ ಭರವಸೆಯನ್ನು ನೀಡಿದರೂ ಅದನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಿಷನ್ 2030 ನಮ್ಮ ಪ್ರಣಾಳಿಕೆಯ ಆಧಾರವಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಪ್ರಣಾಳಿಕೆಗೆ ಮಹತ್ವ ನೀಡುವ ಕೆಲಸವನ್ನು ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಮಾಡಿದೆ. ನಮ್ಮ ಪಕ್ಷ ಕೇವಲ ಭರವಸೆಗಳನ್ನು ನೀಡುವುದಷ್ಟೇ ಅಲ್ಲ, ಅಧಿಕಾರಕ್ಕೆ ಬಂದಾಗ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಮ್ಮ ಸರ್ಕಾರದ ಸಾಧನೆಯ ಬಗ್ಗೆಯೂ ಮಾತನಾಡಿದ ಸಿಎಂ ಗೆಹ್ಲೋಟ್, ರಾಜಸ್ಥಾನದ ಆರ್ಥಿಕ ಪರಿಸ್ಥಿತಿಯನ್ನು ನಾವು ನಿರ್ವಹಿಸಿದ ರೀತಿಯ ಬಗ್ಗೆ ರಾಜಸ್ಥಾನ ಜನರಿಗೆ ಹೆಮ್ಮೆ ಇದೆ. ರಾಜಸ್ಥಾನ ನಾಗರೀಕರ ತಲಾ ಆದಾಯ 46.48% ಹೆಚ್ಚಾಗಿದೆ. ಈ ಮೂಲಕ ನಾವು ತಲಾದಾಯದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.