RGV wish to CM Revanth reddy : ಕಳೆದ 10 ವರ್ಷಗಳ ನಂತರ ತೆಲಂಗಾಣದಲ್ಲಿ ಸರ್ಕಾರ ಬದಲಾಗುವ ಎಲ್ಲಾ ಲಕ್ಷಣಗಳು ಗೋಚರವಾಗಿದೆ. ಅದರಂತೆ ಕಾಂಗ್ರೆಸ್‌ 63 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಬಂದಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಗೆಲುವಿನ ಸುದ್ದಿ ಹೊರಬಿಳಲಿದೆ. ಇದರ ಬೆನ್ನಲ್ಲೆ ತೆಲಂಗಾಣ ನೂತನ ಸಿಎಂ ರೇವಂತ್‌ ರೆಡ್ಡಿಗೆ  ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.


COMMERCIAL BREAK
SCROLL TO CONTINUE READING

ಈ ಪೈಕಿ ಟಾಲಿವುಡ್‌ ಸ್ಟಾರ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ನೂತನ ಸಿಎಂಗೆ ವಿಭಿನ್ನವಾಗಿ ಶುಭ ಕೋರಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ರೇವಂತ್‌ ರೆಡ್ಡಿ ಜೊತೆಗಿರುವ ಫೋಟೋ ಹಂಚಿಕೊಂಡು, ಭಾವಿ ಮುಖ್ಯಮಂತ್ರಿಗೆ ಶುಭ ಕೋರಿದ್ದಾರೆ.


ನಟಿ ಉರ್ಫಿ ಜಾವೇದ್ ಕ್ಷಮೆ ಕೇಳಿದ ʼಇನ್‌ಸ್ಟಾಗ್ರಾಮ್ʼ..! ಅಸಲಿಗೆ ಆಗಿದ್ದಾದ್ರು ಏನು..?


ಪೋಸ್ಟ್‌ನಲ್ಲಿ, ಸೂಪರ್‌, ಡೂಪರ್‌, ನೀವು ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ಹೆಮ್ಮೆ ಇದೆ ರೇವಂತ್‌ ರೆಡ್ಡಿ, ತೆಲಂಗಾಣ ವೀರ ಯೋಧ, ಅಭಿನಂದನೆಗಳು ಅಂತ ಶೀರ್ಷಿಕೆ ಬರೆದುಕೊಂಡಿರುವ ಆರ್‌ಜಿವಿ ರೇವಂತ್‌ ರೆಡ್ಡಿ ಜೊತೆಗಿರುವ ಫೋಟೋ ಹಂಚಿಕೊಂಡು ನೂತನ ಸಿಎಂಗ್ ವಿಶ್‌ ಮಾಡಿದ್ದಾರೆ.


ಇನ್ನು ಬೆಳಿಗ್ಗೆಯಿಂದಲೇ ಮುನ್ನಡೆ ಕಾಯ್ದುಕೊಂಡು ಬಂದ ಕಾಂಗ್ರೆಸ್‌ ಸಧ್ಯ 63 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಅಲ್ಲದೆ, ಈಗಾಗಲೇ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್‌ ನಂಬರ್‌ 60 ಅನ್ನು ಕೈ ಪಡೆ ತನ್ನದಾಗಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರವಾಗಿದ್ದು, ಸ್ಪಷ್ಟ ಬಹುಮತದಿಂದ ಕಾಂಗ್ರೆಸ್‌ ಸರ್ಕಾರ ರಚಿಸಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.