ನವದೆಹಲಿ: ಆಂಧ್ರಪ್ರದೇಶದಲ್ಲಿ 23 ವರ್ಷದ ಮಹಿಳೆಯನ್ನು 13 ವರ್ಷ ವಯಸ್ಸಿನ ಬಾಲಕನು ವಿವಾಹವಾಗಿದ್ದಾನೆ. ಈಗ ಮದುವೆ ಸಮಾರಂಭದ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಬಾಲಕನ ತಾಯಿಯ ಅನಾರೋಗ್ಯದ ಕಾರಣದಿಂದಾಗಿ  ಏಪ್ರಿಲ್ 27 ರಂದು  ಈ ಮದುವೆ ನಡೆದಿದೆ ಎಂದು ತಿಳಿದುಬಂದಿದೆ.ಬಾಲಕನ ತಂದೆಯು ಮಧ್ಯಪಾನಿಯಾಗಿದ್ದರಿಂದ ಮಗನ ಭವಿಷ್ಯದ ಕುರಿತು ಚಿಂತಳಿತಳಾಗಿ  ಆಕೆಯ ಸಾವಿನ ಸಂದರ್ಭದಲ್ಲಿ ಯಾರಾದರೂ ಅವನನ್ನು ನೋಡಿಕೊಳ್ಳಬೇಕೆಂದು ಅವಳು ಬಯಸಿದ್ದಳು. ಆದ್ದರಿಂದ ದೂರದ ಸಂಬಂಧಿಕರ ಮೂಲಕ ಬಾಲಕನಿಗೆ ಕನ್ಯೆಯನ್ನು ವರಿಸಲು ಹುಡುಕಿದ್ದಾರೆ ಎನ್ನಲಾಗಿದೆ 


ಈ ಬಾಲಕ ಮದುವೆಯು ಸಾರ್ವಜನಿಕವಾದ ನಂತರ, ಬಾಲಕನ ಪೋಷಕರು ಮತ್ತು ಮಹಿಳೆಯ ಕುಟುಂಬ ಕಾಣೆಯಾಗಿದೆ. ಇದಕ್ಕಾಗಿ ಪೊಲೀಸರು ಅವರನ್ನು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.