ಮೈಸೂರು : ಮಾಜಿ ಸಚಿವ ಹಾಗೂ ನಟ ಅಂಬರೀಶ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರ ಸ್ನೇಹಿತ ಸಂದೇಶ್ ನಾಗರಾಜ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರು ತಮ್ಮ ಆರೋಗ್ಯ ಸರಿಯಿಲ್ಲದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಮೈಸೂರಿನ ಸಂದೇಶ್ ಡಿ ಪ್ರಿನ್ಸ್ ಹೋಟೆಲ್ ಮಾಲೀಕ ಹಾಗೂ ಅಂಬರೀಶ್ ಆಪ್ತ ಸಂದೇಶ್ ನಾಗರಾಜ್ ಹೇಳಿದ್ದಾರೆ. 


ಕಾಂಗ್ರೆಸ್ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದರೂ ಸಹ, ಕೇವಲ ಶಾಸಕನಾಗಲು ನಾನೇಕೆ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದಿದ್ದ ಅಂಬರೀಶ್, ಶನಿವಾರ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ತಿಳಿಸಿದ್ದರು. ಆದರೆ, ಕಾಂಗ್ರೆಸ್ ಅಂಬರೀಶ್ ಅಮನ ಒಲಿಸಲು ಪ್ರಯತ್ನಿಸಿತ್ತು. ಅಲ್ಲದೆ, ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗಾಗಿ ಸಮಯ ನಿಗದಿಯಾಗಿತ್ತಾದರೂ, ನಗರದ ಸಂದೇಶ್ ದಿ ಪ್ರಿನ್ಸ್ ಹೋಟೆಲ್'ನಲ್ಲಿ ಉಳಿದುಕೊಂಡಿದ್ದ ಅಂಬರೀಶ್, ಸಿದ್ದರಾಮಯ್ಯ ಅವರನ್ನು ಭೇಟಿಯಾಗದೆ ಬೆಂಗಳೂರಿಗೆ ಹಿಂದಿರುಗಿದ್ದಾರೆ. 


ಈ ನಡುವೆ, ರೆಬೆಲ್​ಸ್ಟಾರ್​ ಅಂಬರೀಶ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲೇಬೇಕೆಂದು ಮೈಸೂರಿಗೆ ಬಂದಿದ್ದ ಅಂಬರೀಶ್​ ಆಪ್ತ ಅಮರಾವತಿ ಚಂದ್ರಶೇಖರ್​ ಅವರೂ ಸಹ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆಗಿದ್ದಾರೆ. 


ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಟ ಅಂಬರೀಶ್ ಯಾಕಿಷ್ಟು ಮೊಂಡಾಟ ತೋರುತ್ತಿದ್ದಾರೆ? ಬೇಡವೆಂದರೂ ಕಾಂಗ್ರೆಸ್ ಯಾಕೆ ಅಂಬರೀಶ್ ಅವರ ಹಿಂದೆ ಬಿದ್ದಿದೆ? ಎಂಬುದು ಹಲವರ ಪ್ರಶ್ನೆಯಾಗಿದೆ. ಇವೆಲ್ಲದರ ನಡುವೆ ಅಂಬರೀಶ್​ ಕಣ್ಣಾಮುಚ್ಚಾಲೆ ಆಟದಿಂದಾಗಿ ಕಾಂಗ್ರೆಸ್ ನಾಯಕರು ಹೈರಾಣಾಗಿರುವುದಂತೂ ಸತ್ಯ.