ನೈತಿಕ ಪೋಲಿಸಗಿರಿಯ ಮೂಲಕ ಮಹಿಳೆಯ ಡ್ರೆಸ್ ನಿರ್ಧರಿಸುವ ಬಿಜೆಪಿ ಅದೇಗೆ ಮಹಿಳೆಯ ಬೆಂಬಲ ನಿರೀಕ್ಷಿಸುತ್ತಾರೆ?-ಸಿದ್ದು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯ ಯಡಿಯೂರಪ್ಪನವರು ಮಹಿಳೆಯರ ರಕ್ಷಣೆಗೆ ಯಾವುದೇ ಕ್ರಮವನ್ನು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿಲ್ಲ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ರವರನ್ನು ಕಾಲೆಳದಿದ್ದರು.ಇದಕ್ಕೆ ಟ್ವೀಟ್ ಮೂಲಕವೆ ಉತ್ತರಿಸಿರುವ ಸಿದ್ದರಾಮಯ್ಯ "ನಿಮ್ಮ ಪಕ್ಷದ ಶ್ರೀರಕ್ಷೆಯಿಂದಲೇ ಯುವಕರು ಮತ್ತು ಮಹಿಳೆಯರನ್ನು ನೈತಿಕ ಪೋಲಿಸಗಿರಿ ಮೂಲಕ ಗೂಂಡಾಗಳು ಹಲ್ಲೆ ಮಾಡುತ್ತಿದ್ದಾರೆ, ಅಲ್ಲದೆ ಮಹಿಳೆಯ ಉಡುವ ಉಡುಪುಗಳನ್ನು ನೀವು ನಿಯಂತ್ರಿಸುತ್ತಿದ್ದಿರಿ. ನಿಮ್ಮ ಚಿಂತನೆಯಿಂದಲೇ ಟ್ವಿಟ್ಟರ್ ಮೂಲಕ ಮಹಿಳಾ ಪತ್ರಕರ್ತೆಯರ ಮೇಲೆ ಟ್ರೋಲ್ ಮಾಡುವುದರ ಮೂಲಕ ಕಿರುಕುಳ ನೀಡಲಾಗುತ್ತಿದೆ, ಅದೇಗೆ ನೀವು ಮಹಿಳಾ ಶಕ್ತಿ ಬಿಜೆಪಿ ಜೊತೆ ಇರುತ್ತದೆ ಎಂದು ನಿರಿಕ್ಷಿಸುತ್ತಿರಿ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಂದುವರೆದು "ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ ಮೂವರಿಗೆ ಟಿಕೆಟ್ ನ ನೀಡಿದ್ದಿರಿ ಮತ್ತು ರೇಪ್ ಪ್ರಕರಣದ ಆರೋಪ ಹೊಂದಿರುವ ನಿಮ್ಮ ಶಾಸಕನನ್ನು ರಕ್ಷಿಸಲಾಗಿದೆ ಇದು ನಿಮ್ಮ ದಾಖಲೆ. ಅದೇಗೆ ನೀವು ಮಹಿಳಾ ಶಕ್ತಿ ಬಿಜೆಪಿ ಜೊತೆ ಇರುತ್ತದೆ ಎಂದು ನಿರೀಕ್ಷಿಸುತ್ತಿರಿ? ಎಂದು ಟಾಂಗ್ ನೀಡಿದ್ದಾರೆ.