ಪಣಜಿ: ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸುತ್ತದೆ ಎಂದು  ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸುದ್ದಿಗಾರರಿಗೆ ತಿಳಿಸಿದರು.


COMMERCIAL BREAK
SCROLL TO CONTINUE READING

ಪಣಜಿಯ ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ"  ಕರ್ನಾಟಕದಲ್ಲಿ ಬಿಜೆಪಿ ಮೇ 15 ರ ಸಾಯಂಕಾಲ ಫಲಿತಾಂಶದ ನಂತರ ಸರ್ಕಾರವನ್ನು ರಚಿಸುತ್ತದೆ" ಎಂದು ತಿಳಿಸಿದರು.


ಶಾ ಅವರ ಈ ಹೇಳಿಕೆಯು ಬಹುತೇಕ ಮಾಧ್ಯಮಗಳು ಕರ್ನಾಟಕದಲ್ಲಿ ಅತಂತ್ರ ಸರ್ಕಾರವನ್ನು ರಚಿಸಲಿದೆ ಎನ್ನುವ ಚುನಾವಣೋತ್ತರ ಸಮೀಕ್ಷೆಯ ಅಭಿಪ್ರಾಯದ ನಂತರ ಬಂದಿದೆ.ಶನಿವಾರದಂದು ಮುಕ್ತಾಯವಾದ ಚುನಾವಣೆಯ ನಂತರ  ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆಯನ್ನು ಬಹುತೇಕ ಪಕ್ಷಗಳು ಭವಿಷ್ಯ ನುಡಿದಿದ್ದವು. ಅಲ್ಲದೆ ಸಮೀಕ್ಷೆಗಳು ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಅಭಿಪ್ರಾಯಪಟ್ಟಿದ್ದವು.


ಮೇ 12 ರಂದು ಕರ್ನಾಟಕದಲ್ಲಿ ಒಟ್ಟು 222 ಕ್ಷೇತ್ರಗಳಲ್ಲಿ ಮತದಾನ ನಡೆಯಿತು.ಈಗ ಸರ್ಕಾರ ರಚಿಸಲು 112 ರ ಮ್ಯಾಜಿಕ್ ನಂಬರ್ ಅವಶ್ಯವಿದೆ,