ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷ ಒಂಬತ್ತು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಮಾಯಾವತಿ ನೇತೃತ್ವದ ಸಮಾಜವಾದಿ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೆಡಿಎಸ್ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಕಾಂಗ್ರೆಸ್ ಹಿಡಿತದಲ್ಲಿರುವ ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. 


ಅಭ್ಯರ್ಥಿಗಳ ಪಟ್ಟಿ
ಕೊಳ್ಳೇಗಾಲ - ಎನ್‌.ಮಹೇಶ್‌
ಬೀದರ್‌ ಉತ್ತರ- ಮಾರಸಂದ್ರ ಮುನಿಯಪ್ಪ
ಗುಂಡ್ಲುಪೇಟೆ- ಎಸ್‌.ಗುರುಪ್ರಸಾದ್‌
ರಾಯಭಾಗ-ರಾಜೀವ ಸೋಮಪ್ಪ ಕಾಂಬ್ಳೆ
ಚಿಕ್ಕೋಡಿ–ಸದಲಗ- ಸದಾಶಿವಪ್ಪ ವಾಲ್ಕೆ
ಕಲಬುರ್ಗಿ ಗ್ರಾಮೀಣ- ಸೂರ್ಯಕಾಂತ್‌ ನಿಂಬಾಳ್ಕರ್‌
ಶಿರಹಟ್ಟಿ- ಚಂದ್ರಕಾಂತ್‌ ಕದ್ರೋಳಿ ಅಥವಾ ಈರಪ್ಪ ಮಾದರ್‌
ಕಾರ್ಕಳ- ಸಾಣೂರು ಸತೀಶ್‌
ಬಾಗಲಕೋಟೆ ನಗರ- ಮೋಹನ್‌ ಎಂ.ಜಿಗಳೂರು