ಸುಪ್ರೀಂಕೋರ್ಟ್ ನಲ್ಲೊಂದು ಹಾಸ್ಯ ಪ್ರಹಸನ
ಸುಪ್ರೀಂನಲ್ಲಿ ನಡೆದ ವಾದ ಪ್ರತಿವಾದದಲ್ಲಿ ಅಪಹಾಸ್ಯಕ್ಕೆ ತುತ್ತಾದ ಬಿಜೆಪಿ
ನವದೆಹಲಿ: ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ವಿಧಾನಸಭೆಯಲ್ಲಿ ಶನಿವಾರ ಸಂಜೆ 4ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ತೀರ್ಪು ನೀಡಿದೆ. ಅಲ್ಲದೇ ವಿಶ್ವಾಸಮತ ಯಾಚನೆಗೂ ಮುನ್ನ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸುವಂತೆ ಆದೇಶ ನೀಡಿದೆ. ಸುಪ್ರೀಂನಲ್ಲಿ ನಡೆದ ವಾದ ಪ್ರತಿವಾದದಲ್ಲಿ ಬಿಜೆಪಿ ಅಪಹಾಸ್ಯಕ್ಕೆ ತುತ್ತಾದ ಪ್ರಸಂಗ ನಡೆಯಿತು.
ಸುಪ್ರೀಂ: ವಿಶ್ವಾಸಮತ ಯಾಚನೆ ನಾಳೆಯೇ ಆಗುವುದು ಒಳ್ಳೆಯದು
ಬಿಜೆಪಿ : ಇಷ್ಟು ಕಡಿಮೆ ಸಮಯ ಸಾಲುವುದಿಲ್ಲ, ಹೆಚ್ಚಿನ ಕಾಲಾವಕಾಶ ಬೇಕು
ಸುಪ್ರೀಂ: ಹೆಚ್ಚಿನ ಕಾಲಾವಕಾಶ ಏಕೆ ಬೇಕು?
ಬಿಜೆಪಿ : ಕಾಂಗ್ರೆಸ್ , ಜೆಡಿಎಸ್ ಶಾಸಕರು ದೂರದ ಹೈದರಾಬಾದ್ ನಲ್ಲಿ ಇದ್ದಾರೆ. ಅವರು ವಾಪಾಸ್ ಬರಲು ಸಮಯ ಬೇಕು
ಸುಪ್ರೀಂ: ನ್ಯಾಯಾಧೀಶರು ಜೋರಾಗಿ ನಗುವರು, ನಂತರ
ಸುಪ್ರೀಂ: ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ನಾಳೆ ವಿಶ್ವಾಸಮತಕ್ಕೆ ತಾವೇ ಸಿದ್ದ ಎಂದಿದ್ದಾರಲ್ಲಾ
ಇಡೀ ನ್ಯಾಯಲಯದ ಅಂಗಳದ ತುಂಬಾ ನಗು, ಬಿಜೆಪಿ ಪರ ವಕೀಲ ಮುಕಿಲ್ ರೋಹಟಗಿ ಮುಜುಗರ
ಗಂಭೀರ ಚರ್ಚೆಯ ವೇಳೆ ಸುಪ್ರೀಂ ಕೋರ್ಟಿನಲ್ಲಿ ಹಾಸ್ಯದ ಹೊನಲು
ರೆಸಾರ್ಟ್ ಮಾಲೀಕರಿಗೆ ಸರ್ಕಾರ ರಚನೆಗೆ ಅವಕಾಶ ಕೊಡುವ ವಿಷಯದಲ್ಲಿ ಹಾಸ್ಯ.
'ರೆಸಾರ್ಟ್ ಮಾಲೀಕ ಕೂಡ ಸರ್ಕಾರ ರಚನೆಗೆ ಅವಕಾಶ ಕೇಳಿದ್ದಾರಂತೆ',
'ತನ್ನ ಬಳಿ 116 ಶಾಸಕರಿದ್ದಾರೆ, ತಾನೂ ಸಿಎಂ ಆಗಬಹುದು ಎಂದಿದ್ದಾರಂತೆ',
'ಇಂಥದೊಂದು ಜೋಕ್ ವೈರಲ್ ಆಗಿದೆ' ಎಂದು ವೈರಲ್ ಆಗಿರುವ ಜೋಕ್ ಅನ್ನು ನ್ಯಾ. ಎ.ಕೆ. ಸಿಕ್ರಿ ಪ್ರಸ್ತಾಪಿಸಿದರು. ನ್ಯಾ. ಸಿಕ್ರಿ ಮಾತಿನಿಂದ ನ್ಯಾಯಾಂಗಣದ ಅಂಗಳದಲ್ಲಿ ವಕೀಲರು ಮತ್ತು ಪತ್ರಕರ್ತರು ಮನಬಿಚ್ಚಿ ನಕ್ಕರು.