ಕೇವಲ `ಮೋದಿ ಮೋದಿ` ಜಪದಲ್ಲಿಯೇ ಮುಳುಗಿದೆ ಕಾಂಗ್ರೆಸ್ - ಪ್ರಧಾನಿ ಮೋದಿ
ಬೆಳಗಾವಿ: ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ದ ಟೀಕಾಪ್ರಹಾರ ನಡೆಸಿದರು.
ಭಾಷಣದ ಪ್ರಾರಂಭದಲ್ಲಿ ಬಸವಣ್ಣ, ಶಿವಾಜಿ,ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮರನ್ನು ಸ್ಮರಿಸಿದ ಪ್ರಧಾನಿ ಮೋದಿ "ಕಾಂಗ್ರೆಸ್ ಕಳೆದ 5 ವರ್ಷಗಳ ಸಾಧನೆ ಜನರಿಗೆ ತಿಳಿಸುವ ಬದಲು, ಕೇವಲ 'ಮೋದಿ ಮೋದಿ' ಜಪದಲ್ಲಿಯೇ ಮುಳುಗಿದೆ. ಇದರಿಂದಲೇ ತಿಳಿಯುತ್ತದೆ, 5 ವರ್ಷಗಳಲ್ಲಿ ಕಾಂಗ್ರೆಸ್ ಕರ್ನಾಟಕಕ್ಕೆ ಏನನ್ನೂ ಮಾಡಿಲ್ಲವೆಂದು" ಟೀಕಿಸಿದರು.
ಎಂದಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದ ಮೋದಿ" ಮುಖ್ಯಮಂತ್ರಿಗಳು ಸೋಲಿನ ಭೀತಿಯಿಂದ ಸ್ಪರ್ಧಿಸುತ್ತಿರುವ ಎರಡನೇ ಕ್ಷೇತ್ರವಾದ ಬಾದಾಮಿಯಲ್ಲೂ ಕೂಡ ಅಕ್ರಮ ಎಸಗಲು 'ಸಿದ್ಧ'ತೆ ನಡೆಸಿದ್ದಾರೆ. 'ಬಾದಾಮಿ'ಯನ್ನು ಕೂಡಾ 'ಬದನಾಮ್' ಮಾಡಲು ಯತ್ನಿಸುತ್ತಿದ್ದಾರೆ " ಎಂದು ಕಿಡಿಕಾರಿದರು
ಕೊನೆಯ ಹಂತದ ಪ್ರಚಾರದಲ್ಲಿರುವ ಪ್ರಧಾನಿ ಮೋದಿಯವರು ಕರ್ನಾಟಕದ ಚುನಾವಣೆಯಲ್ಲಿ ಗೆಲ್ಲಲು ಕೊನೆಯ ಹಂತದ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇತ್ತೇಚೆಗೆ ಮೋದಿಯವರೆಗೆ ಕೇವಲ ಭಾಷಣದಿಂದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.