ಕಾಂಗ್ರೆಸ್ ಗೆ ಸಿಗಲಿದೆ 20 ಸಚಿವ ಸ್ಥಾನ ಮತ್ತು ಉಪ ಮುಖ್ಯಮಂತ್ರಿ ಹುದ್ದೆ
ಬೆಂಗಳೂರು: ಕರ್ನಾಟಕದಲ್ಲಿ ಈಗ ಯಡಿಯೂರಪ್ಪ ನೇತೃತ್ವದ ಮೂರು ದಿನಗಳ ಬಿಜೆಪಿ ಸರ್ಕಾರದ ಪತನದೊಂದಿಗೆ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಕೂಟದ ಮುಖ್ಯಮಂತ್ರಿಯಾಗಿ ಮೇ 23 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ವರದಿಗಳ ಪ್ರಕಾರ, ಕಾಂಗ್ರೆಸ್ ಗೆ 20 ಮತ್ತು ಜೆಡಿಎಸ್ ಗೆ 13 ಸಚಿವ ಸ್ಥಾನದ ಮಂತ್ರಿ ಮಂಡಲವನ್ನು ಈ ಸರ್ಕಾರ ಹೊಂದಿರುತ್ತದೆ ಎನ್ನಲಾಗಿದೆ.ಇದರಲ್ಲಿ ಪ್ರಮುಖವಾಗಿ ಹಣಕಾಸು ಸಚಿವ ಹುದ್ದೆಯನ್ನು ಕುಮಾರಸ್ವಾಮಿಯವರೇ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಜಿ ಪರಮೇಶ್ವರ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ ಎನ್ನಲಾಗಿದೆ.
ಮೇ 21 ರಾಜೀವ್ ಗಾಂಧೀ ಹುತಾತ್ಮದಿನವಾಗಿದ್ದರಿಂದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಮೇ 23 ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ರಾಷ್ಟ್ರದ ಪ್ರಮುಖ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಆ ಮೂಲಕ ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿದುಬಂದಿದೆ.