ಸರ್ಕಾರಿ ಬಂಗಲೆ ಬಳಸುವುದಿಲ್ಲ, ಜೆ.ಪಿ.ನಗರದ ಬಂಗಲೆಯನ್ನೇ ಬಳಸುವೆ- ಎಚ್ ಡಿಕೆ
ದುಂದು ವೆಚ್ವಕ್ಕೆ ಕಡಿವಾಣ ಹಾಕುವುದು ನನ್ನ ಉದ್ದೇಶ- ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಾನು ನನ್ನ ಅವಧಿಯಲ್ಲಿ ಸರ್ಕಾರಿ ಬಂಗಲೆ ಬಳಸದೇ ಇರಲು ನಿರ್ಧರಿಸಿದ್ದೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನಾನು ನನ್ನ ಅವಧಿಯಲ್ಲಿ ಸರ್ಕಾರಿ ಬಂಗಲೆ ಬಳಸದೇ ಇರಲು ನಿರ್ಧರಿಸಿದ್ದೇನೆ. ಜೆ.ಪಿ.ನಗರದ ನಿವಾಸವನ್ನೇ ಬಳಸುತ್ತೇನೆ. ನನ್ನ ಮಾದರಿಯನ್ನೇ ಉಳಿದ ಸಚಿವರು ಅನುಸರಿಸಲಿ ಎಂಬುದು ನಮ್ಮ ಬಯಕೆ. 25 ವರ್ಷಗಳ ಹಿಂದೆ ಜೆ.ಪಿ.ನಗರ ನಿವಾಸ ನಿರ್ಮಾಣ ಮಾಡಿದೆ. ಅದರಿಂದ ನಿಶ್ಚಿತವಾಗಿ ಒಳ್ಳೆಯದಾಗಿದೆ ಎಂದು ಎಚ್ ಡಿಕೆ ತಿಳಿಸಿದ್ದಾರೆ.
ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮ ಮುಂದುವರೆಸುವೆ
ನಾನು ನನ್ನ ಆರೋಗ್ಯದ ಬಗ್ಗೆ ನಿಗಾ ವಹಿಸಲು ವೈದ್ಯರು ಸೂಚಿಸಿದ್ದಾರೆ. ಜನರ ಮಧ್ಯೆ ಇದ್ದರೆ ಮಾತ್ರ ನಾನು ಆರೋಗ್ಯವಾಗಿರುತ್ತೇನೆ. ಹಾಗಾಗಿ ಗ್ರಾಮವಾಸ್ತವ್ಯದಂತಹಾ ಕಾರ್ಯಕ್ರಮ ಮುಂದುವರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.