ನಾಳೆ ಬಹುಮತ ಸಾಬೀತಿಗೆ `ಸುಪ್ರೀಂ` ಆದೇಶ ಸ್ವಾಗತಾರ್ಹ
ಬಹುಮತ ಸಾಬೀತು ಪ್ರಕ್ರಿಯೆ ಬಗ್ಗೆ ನಾನು ಉತ್ಸುಕನಾಗಿದ್ದೇನೆ- ಎಚ್.ಡಿ. ದೇವೇಗೌಡ
ಬೆಂಗಳೂರು: ನಾಳೆ(ಮೇ.19) ಬಹುಮತ ಸಾಬೀತಿಗೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದು ಸ್ವಾಗತಾರ್ಹ. ಬಹುಮತ ಸಾಬೀತು ಪ್ರಕ್ರಿಯೆ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ವಿಶ್ವಾಸಮತ ಯಾಚನೆ ವೇಳೆ ಬಿ.ಎಸ್. ಯಡಿಯೂರಪ್ಪಗೆ ಬಹುಮತ ಸಿಕ್ಕರೆ ಅವರೇ ಮುಂದುವರೆಯಲಿ, ಇಲ್ಲವಾದರೆ ಸರ್ಕಾರ ಬದಲಾಗುತ್ತದೆ ಎಂದು ಎಚ್ಡಿಡಿ ತಿಳಿಸಿದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದರ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಜೆಡಿಎಸ್ ವರಿಷ್ಠರು, ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನನಗೆ ಸಂತಸವೂ ಇಲ್ಲ, ಬೇಸರವೂ ಇಲ್ಲ. ಇದುವರೆಗೂ ನಾವು ಪೂರ್ಣ ಬಹುಮತದಿಂದ ಸರ್ಕಾರ ರಚಿಸಿಲ್ಲ. ಇದರ ಬಗ್ಗೆ ಈಗಲೂ ಬೇಸರವಿದೆ ಎಂದು ತಿಳಿಸಿದರು.