ರಾಮನಗರ/ಚನ್ನಪಟ್ಟಣ: ಚನ್ನಪಟ್ಟಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಎರಡೂ ಕ್ಷೇತ್ರಗಳಲ್ಲೂ ನಾನು ಚುನಾವಣೆಗೆ ಸ್ಪರ್ಧೆ ಮಾಡಿರುವುದರ ಉದ್ದೇಶ, ರಾಮನಗರ-ಚನ್ನಪಟ್ಟಣ ಎರಡೂ ಕ್ಷೇತ್ರಗಳನ್ನು ಅವಳಿ ನಗರವನ್ನಾಗಿಸಿ ಕೈಗಾರಿಕೆಗಳನ್ನು ತಂದು ಅಭಿವೃದ್ಧಿ ಮಾಡುವುದು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪಕ್ಷದ ಕಾರ್ಯಕರ್ತರ ಒತ್ತಾಯದ ಮೇಲೆ ರಾಮನಗರ ವಿಧಾನಸಭಾ ಕ್ಷೇತ್ರದ ಜೊತೆ ಚನ್ನಪಟ್ಟಣದಲ್ಲಿ ಕೂಡಾ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದ ಎಚ್ಡಿಕೆ ರಾಜ್ಯದ ಜನರ ನಾಡಿಮಿಡಿತ ದ ಪ್ರಕಾರ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸದಿಂದ ನುಡಿದರು. 


ನಾನು ಯಾರಿಗೂ ತಲೆಬಾಗೊಲ್ಲ. ನನ್ನನ್ನ ಬೆಳೆಸಿದ ಜನತೆಗೆ ತಲೆಬಾಗ್ತೀನಿ ಅಷ್ಟೆ. ರಾಮನಗರದ‌ ಜನ ನನ್ನನ್ನ ಬೆಳೆಸಿ ಅತ್ಯುನ್ನತ ಸ್ಥಾನ ಕಲ್ಪಿಸಿದ್ದೀರಿ. ಈ ಚುನಾವಣೆಯಲ್ಲೂ ನನಗೆ ನೀವುಗಳು ಹೆಚ್ಚಿನ ರೀತಿಯಲ್ಲಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ  ಎಚ್.ಡಿ. ಕುಮಾರಸ್ವಾಮಿ ನಾನು ರಾಮನಗರದ ಅತಿಥಿ ಅಲ್ಲ, ರಾಮನಗರದ ಮನೆ ಮಗ ಎಂದರು.