ಬೆಂಗಳೂರು: ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ ಎಂಬ ವಾಕ್ಯದೊಂದಿಗೆ ನಮ್ಮ ಪ್ರಣಾಳಿಕೆ 2 ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆಗಿಂತ ಭಿನ್ನವಾಗಿದೆ. ಸಾಮಾಜಿಕೆ ನ್ಯಾಯ, ಕೈಗಾರಿಕಾ ವಿಷಯ, ವಿದ್ಯುತ್ ಶಕ್ತಿ ಕ್ಷೇತ್ರದಲ್ಲಿ ಪರಿಹಾರ ಇದೆ. ಸಣ್ಣ ಕೈಗಾರಿಕಾ ಬಗ್ಗೆ ನಮ್ಮ ನಿಲುವು, ರಾಮನಗರದಲ್ಲಿ ಫಿಲ್ಮ್ ಸಿಟಿ ನಿರ್ಮಾಣ, ಯುವಕರಿಗೆ ಉದ್ಯೋಗ ಸೃಷ್ಠಿ ಸೇರಿದಂತೆ ಹಲವು ವಿಭಿನ್ನ ಯೋಜನೆಗಳೊಂದಿಗೆ ಜೆಡಿಎಸ್ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಜೆಡಿಎಸ್ ಚುನಾವಣೆ  ಪ್ರಣಾಳಿಕೆ ಪ್ರಮುಖಾಂಶಗಳು...


  • ರೈತರ ಸಂಪೂರ್ಣ ಸಾಲಮನ್ನಾ.

  • ಗ್ರಾಮೀಣ ಭಾಗದ  ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ವಿದ್ಯುತ್.

  • ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಉಚಿತ.

  • ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆ.

  • ಶ್ರೀ ಶಕ್ತಿ ಸ್ವಸಾಯ ಸಂಘಗಳ ಸಾಲ ಮನ್ನಾ.

  • ಗರ್ಭಿಣಿಯರಿಗೆ 6 ತಿಂಗಳಿನಿಂದ 12 ತಿಂಗಳ ತಿಂಗಳ ವರೆಗೂ ಪ್ರತಿ ತಿಂಗಳು 6,000 ರೂ. ಧನಸಹಾಯ. 

  • ವಿಕಲಚೇತನರಿಗೆ ತಿಂಗಳಿಗೆ 2000 ಸಹಾಯಧನ.

  • 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮಾಸಿಕ 5000 ರೂ.

  • ಪ್ರತಿ ತಿಂಗಳು ವಿಧಾನಸೌಧದದಲ್ಲಿ ರೈತರ ಸಭೆ.

  • ವಿಧವವೇತನ ಮಾಸಿಕ 2000 ರೂ.

  • ವಿಕಲಚೇತರನ್ನು ಮದುವೆ ಯಾದರೆ 50 ಸಾವಿರದಿಂದ 1 ಲಕ್ಷದವರೆಗೆ ಸಹಾಯಧನ

  • ಹಳ್ಳಿಗಳ ಅವಿದ್ಯಾವಂತ ಯುವಕ, ಯುವತಿಯರಿಗೆ ಸಸಿ ನಡೆವ ಕೆಲಸ ನೀಡಿ ಮಾಸಿಕ 5000 ರೂ ಗೌರವಧನ.

  • ವಯೋವೃದ್ಧರಿಗೆ ಉಚಿತ ಬಸ್ ಪಾಸ್.

  • ಬಿಪಿಎಲ್ ಕಾರ್ಡ್ ದಾರರಿ ಗೆ 30 ಕೆಜಿ ಅಕ್ಕಿ.

  • ರೈತರ ಬೆಳೆಗೆ ಬೆಂಬಲ ಬೆಲೆ.

  • ಸಣ್ಣ ಟ್ರಾಕ್ಟರ್ ಖರೀದಿಗೆ ಶೇ75 ರಷ್ಟು ಹಾಗೂ ಇತರೆ ಸಲಕರಣೆ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.

  • ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಮಾಸಿಕ 2000 ರೂ.

  • ಆರ್ಯವೈಶ್ಯ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ.

  • ಉದ್ಯೋಗವಂತ ಮಹಿಳೆಯರಿಗೆ ಬೆಂಗಳೂರಿನಲ್ಲಿ ಸು.100 ವಸತಿ ನಿಲಯಗಳ ಸ್ಥಾಪನೆ.

  • ಡಾ. ವಿಷ್ಣುವರ್ಧನ್ ಸಮಾಧಿ ಸ್ಥಳದ ವಿವಾದ ಬಗೆಹರಿಸಲಾಗುವುದು.

  • ಆಶಾ ಕಾರ್ಯಕರ್ತರ ಪ್ರೋತ್ಸಾಹ ಧನ 3500 ರಿಂದ 5000 ರೂಗೆ ಏರಿಕೆ.

  • ವಕೀಲರ ಸಂಘಕ್ಕೆ 100 ಕೋಟಿ ಅನುದಾನ. ಮತ್ತು ವಕೀಲರಿಗೆ 5000 ಸ್ಟೇಪೆಂಡ್.

  • ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದುವರಿಕೆ.