ವಲಸಿಗರಿಗೆ ಮಣೆ ಹಾಕಿದ ಜೆಡಿಎಸ್
ಈ ಹಿಂದೆ 126 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್, 56 ಕ್ಷೇತ್ರಗಳಿಗೆ ಎರಡನೇ ಪಟ್ಟಿ ಪ್ರಕಟಿಸಿದೆ. ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್-ಬಿಜೆಪಿಯಿಂದ ವಲಸೆ ಬಂದ ಬಹುತೇಕ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಈ ಹಿಂದೆ 126 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್, ಅಳೆದು ತೂಗಿ 56 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ತನ್ನ ಎರಡನೇ ಪಟ್ಟಿ ಪ್ರಕಟಿಸಿದೆ.
ಇನ್ನೂ 22 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿರುವ ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್-ಬಿಜೆಪಿಯಿಂದ ವಲಸೆ ಬಂದ ಬಹುತೇಕ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಇದರ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಬಂಡಾಯದ ಲಾಭ ಪಡೆಯಲು ಮುಂದಾಗಿದೆ.
ಕ್ಷೇತ್ರ | ಅಭ್ಯರ್ಥಿ |
ಹೊಸದುರ್ಗ | ನಟ ಶಶಿಕುಮಾರ್ |
ಸಿ.ವಿ.ರಾಮನ್‌ನಗರ | ರಮೇಶ್ |
ಚಾಮರಾಜಪೇಟೆ | ಅಲ್ತಾಫ್ ಖಾನ್ |
ರಾಯಚೂರು ಗ್ರಾಮೀಣ | ರವಿ ಪಾಟೀಲ್ |
ಬೆಂಗಳೂರು ದಕ್ಷಿಣ | ಪ್ರಭಾಕರ ರೆಡ್ಡಿ |
ರಾಜಾಜಿನಗರ | ಜೇಡರಹಳ್ಳಿ ಕೃಷ್ಣಪ್ಪ |
ಕ್ಷೇತ್ರ | ಅಭ್ಯರ್ಥಿ |
ಭಾಲ್ಕಿ | ಪ್ರಕಾಶ್ ಖಂಡ್ರೆ |
ಚಿಕ್ಕಪೇಟೆ | ಹೇಮಚಂದ್ರ ಸಾಗರ್ |
ರಾಜರಾಜೇಶ್ವರಿ ನಗರ | ಎಂ. ರಾಮಚಂದ್ರ |
ಮುದ್ದೇಬಿಹಾಳ | ಮಂಗಳಾದೇವಿ ಬಿರಾದಾರ್ |
ಶಾಂತಿನಗರ | ಶ್ರೀಧರರೆಡ್ಡಿ |