ಕರ್ನಾಟಕ ಫಲಿತಾಂಶವು ಪ್ರಧಾನಿ ಮೋದಿಗೆ ಎಚ್ಚರಿಕೆ ಗಂಟೆಯಾಗಿದೆ -ಅಮೆರಿಕಾದ ಮೀಡಿಯಾ
ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಬಹುಮತ ಸಾಧಿಸಿದ್ದರು ಸಹಿತ ಅದು ಪ್ರಧಾನಿ ಮೋದಿಯವರಿಗೆ ಎಚ್ಚರಿಕೆಯ ಗಂಟೆ ಎಂದು ವಿದೇಶಿ ಮಾಧ್ಯಮಗಳು ಕರ್ನಾಟಕದಲ್ಲಿನ ಚುನಾವಣೆಯ ಬೆಳವಣಿಗೆಗಳ ಕುರಿತಾಗಿ ಬಣ್ಣಿಸಿವೆ.
ಈ ಕುರಿತಾಗಿ ಅಮೇರಿಕ ಮೂಲದ ಬ್ಲೂಮ್ ಬರ್ಗ್ ಮಿಡಿಯಾ ಏಜೆನ್ಸಿ" Hard-Fought Poll in India's South Hands Modi Fragile Victory " ಎನ್ನುವ ಲೇಖನವೊಂದರಲ್ಲಿ ಕರ್ನಾಟಕದ ಚುನಾವಣೆ ಕುರಿತು ವಿಶ್ಲೇಷಿಸಿದೆ.ಕರ್ನಾಟಕದಲ್ಲಿನ ಫಲಿತಾಂಶವು ಪ್ರಮುಖವಾಗಿ ಮೋದಿಯವರಿಗೆ ಅಪಾಯಕಾರಿಯಾಗಿದೆ ಕಾರಣ ಮುಂಬರುವ ಚುನಾವಣೆಯಲ್ಲಿ ಎಲ್ಲ ಪ್ರತಿಪಕ್ಷಗಳು ಒಂದಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯೋಜನೆ ರೂಪಿಸುತ್ತಿವೆ ಎಂದು ಅದು ತಿಳಿಸಿದೆ.
ಇತ್ತೀಚಿಗೆ ಕರ್ನಾಟಕ ವಿಧಾನಸಭಾದಲ್ಲಿ ಬಿಜೆಪಿಯು 104 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಹುಮತಕ್ಕೆ ಬೇಕಾದ 113 ಸದಸ್ಯರ ಮ್ಯಾಜಿಕ್ ನಂಬರ್ ಕೊರತೆ ಇತ್ತು. ಆದರೆ, ರಾಜ್ಯಪಾಲರು ಬಹುಮತದ ಸಂಖ್ಯೆಯನ್ನು ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಅಹ್ವಾನ ನೀಡುವ ಬದಲಾಗಿ ಬಿಜೆಪಿಗೆ ನೀಡಿದ್ದರು. ಇದು ರಾಜಕೀಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.