ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು(ಮೇ 12) ಬೆಳಿಗ್ಗೆಯಿಂದ ಮತದಾನ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ತಮ್ಮ ತವರೂರಾದ ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಿದರು. 


COMMERCIAL BREAK
SCROLL TO CONTINUE READING

ತಮ್ಮ ಪುತ್ರ ಯತೀಂದ್ರ ಜತೆ ತೆರಳಿ ಸಿಎಂ ಸಿದ್ದರಾಮಯ್ಯ ಮತದಾನ ಮಾಡಿದರು. ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದು, ಅವರ ಪುತ್ರ ಡಾ. ಯತೀಂದ್ರ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ.
 
ಮತದಾನದ ನಂತರ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಾನು ನನ್ನ ಪುತ್ರ ವರುಣಾ ಕ್ಷೇತ್ರದಲ್ಲಿ ಮತದಾನ ಮಾಡಿದೆವು. ಕರ್ನಾಟಕದ ಮತದಾರರು ಯಾವಾಗಲೂ ರಾಜಕೀಯ ಪರಿಪಕ್ವತೆಯನ್ನು ಪ್ರದರ್ಶಿಸುತ್ತಾರೆ. ನಮ್ಮ ದೇಶವು ಹೆಚ್ಚು ಅಗತ್ಯವಿರುವ ಬದಲಾವಣೆಯನ್ನು ಪ್ರಾರಂಭಿಸುತ್ತದೆ. ದಯವಿಟ್ಟು ಶಾಂತಿಯುತ ಕರ್ನಾಟಕಕ್ಕಾಗಿ ಮತ ನೀಡಿ ಎಂದು ತಿಳಿಸಿದ್ದಾರೆ.