ಮೋದಿಗೆ 4 ವಿಷಯಗಳ ಬಗ್ಗೆ 4 ವರ್ಷಗಳಲ್ಲಿ ಮಾಡಿದ ಕಾರ್ಯದ ಕುರಿತು ಕೇವಲ 4 ನಿಮಿಷ ಮಾತನಾಡಲು ಸಾಧ್ಯವೇ- ಜಿಗ್ನೇಶ್ ಮೇವಾನಿ
ಬೆಂಗಳೂರು: ಟ್ವಿಟ್ಟರ್ ನಲ್ಲಿ ಭಾಷಣದಲ್ಲಿ 15 ನಿಮಿಷಗಳ ಭಾಷಣದ ಸವಾಲು ಮುಂದುವರೆದ ಹಿನ್ನೆಲೆಯಲ್ಲಿ, ಈಗ ಈ ಚರ್ಚೆಗೆ ಹೊಸ ಸೇರ್ಪಡೆಯಾಗಿ ದಲಿತ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ಕಣಕ್ಕಿಳಿದಿದ್ದಾರೆ
.
ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿರುವ ಜಿಗ್ನೇಶ್ ಮೇವಾನಿ " ಪ್ರಧಾನಿ ಮೋದಿಯವರಿಗೆ ಈ ಕೆಳಗಿನ ನಾಲ್ಕು ವಿಷಯಗಳ ಬಗ್ಗೆ ನಾಲ್ಕು ವರ್ಷಗಳಲ್ಲಿ ಮಾಡಿರುವ ಕಾರ್ಯದ ಕುರಿತು ಕೇವಲ ನಾಲ್ಕು ನಿಮಿಷಗಳ ಕಾಲ ಮಾತನಾಡಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದಾರೆ. ಅದರಲ್ಲಿ 1) 2 ಕೋಟಿ ಉದ್ಯೋಗ ಸೃಷ್ಟಿ 2)ರೈತರ ಆತ್ಮಹತ್ಯೆ 3) ದಲಿತರು,ಅಲ್ಪಸಂಖ್ಯಾತರು,ಮತ್ತು ಮಹಿಳೆಯರ ಮೇಲೆ ಹಲ್ಲೆ ಪ್ರಕರಣ 4) ಹಣದುಬ್ಬರ.
ಕರ್ನಾಟಕ ಚುನಾವಣೆಯಲ್ಲಿ 15 ನಿಮಿಷಗಳ ಭಾಷಣದ ಚರ್ಚೆ ಕಾವೇರಿದ ಸಂದರ್ಭದಲ್ಲೇ ಈಗ ಜಿಗ್ನೇಶ್ ಮೇವಾನಿ ನಾಲ್ಕು ನಿಮಿಷದ ಭಾಷಣದ ಬಗ್ಗೆ ಸವಾಲು ಹಾಕಿರುವುದು ಈಗ ಸಾಕಷ್ಟು ಸುದ್ದಿ ಮಾಡಿದೆ.