ಬೆಂಗಳೂರು: ದಕ್ಷಿಣಕ್ಕೆ ಮುಖ್ಯಮಂತ್ರಿ ಇದ್ದಾರೆ, ಉತ್ತರಕ್ಕೆ ಉಪಮುಖ್ಯಮಂತ್ರಿ(ಡಿಸಿಎಂ) ನೀಡಲಿ ಅನ್ನೋದು ಆಸೆ. ದಕ್ಷಿಣದಲ್ಲಿ ಡಾ. ಜಿ. ಪರಮೇಶ್ವರ ಅಥವಾ ಡಿ.ಕೆ. ಶಿವಕುಮಾರ್ ಅವರಿಗೆ ಡಿಸಿಎಂ ಕೊಟ್ಟರೆ, ಉತ್ತರ ಕರ್ನಾಟಕದಲ್ಲೂ ಒಬ್ಬರಿಗೆ ಉಪಮುಖ್ಯಮಂತ್ರಿ(ಡಿಸಿಎಂ) ಕೊಟ್ಟರೆ ಒಳ್ಳೆಯದು. ನಮ್ಮ ಸಮುದಾಯದ ಯಾರಿಗೇ ಆಗಲಿ ಒಂದು ಡಿಸಿಎಂ ಹುದ್ದೆ ಕೊಡಲಿ. ಅದು ನಾನಾಗಬಹುದು ಅಥವಾ ಶಾಮನೂರು ಶಿವಶಂಕರಪ್ಪನವರಾಗಿರಬಹುದು ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.


COMMERCIAL BREAK
SCROLL TO CONTINUE READING

ನಗರದ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಉಪ ಮುಖ್ಯಮಂತ್ರಿ(ಡಿಸಿಎಂ) ಹುದ್ದೆಯ ಆಸೆಯೂ ಇದೆ. ಸಚಿವ ಸ್ಥಾನ ನೀಡುವಾಗ ಹೈಕಮಾಂಡ್ ಜಾತಿ, ಸಮುದಾಯ, ಹಿರಿತನ ಎಲ್ಲವನ್ನೂ ನೋಡುತ್ತದೆ’. ನಮ್ಮ ಸಮುದಾಯದ ಯಾರಿಗೇ ಆಗಲಿ ಒಂದು ಡಿಸಿಎಂ ಹುದ್ದೆ ಕೊಡಿ ಎಂದು ನಾವು ಸಿದ್ದರಾಮಯ್ಯ ಅವರ ಬಳಿ ವಿನಂತಿ ಮಾಡಿದ್ದೇವೆ. ನಿನ್ನೆ ನಮ್ಮ ಸಮುದಾಯದ ಶಾಸಕರು ಸಭೆ ನಡೆಸಿದ್ದೇವೆ’ ಎಂದರು.


ನಮ್ಮ ಸಮುದಾಯದ ಯಾರಿಗಾದರೂ ಡಿಸಿಎಂ ಸ್ಥಾನ ನೀಡಲಿ, ಯಾರಿಗೆ ಬೇಕಾದರೂ ಕೊಡಲಿ, ನಾವು ಇಂಥವರಿಗೆ ಕೊಡಿ ಅಂತ ಹೇಳಿಲ್ಲ. ಶಾಮನೂರು ಅವರಿಗೆ ಡಿಸಿಎಂ ಸ್ಥಾನ ಕೊಟ್ಟರೂ ನಮಗೆ ಬೇಜಾರಿಲ್ಲ ಎಂದು ಎಂ.ಬಿ. ಪಾಟೀಲ್ ಹೇಳಿದರು.