ಕಲ್ಬುರ್ಗಿ: ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆಯವರ ಪರಿವಾರದ ಆಸ್ತಿ ಎಷ್ಟಿದೆ ಗೊತ್ತೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಕಲಬುರ್ಗಿ ಸಮಾವೇಶದಲ್ಲಿ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಕಾಂಗ್ರೆಸ್‌ ದಲಿತರ ಮತ ಪಡೆದಿತ್ತು. ನಂತರ ಗುಪ್ತಮತದಾನದ ಹೆಸರಿನಲ್ಲಿ ಬೇರೆಯವರನ್ನು ಮುಖ್ಯಮಂತ್ರಿ ಮಾಡಿ ದಲಿತರಿಗೆ ಮೋಸ ಮಾಡಿತು’. ಈ ಮೂಲಕ ದಲಿತರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.


ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರ್ಕಾರ ಬದಲಿಸಿ ಎಂಬ ಕೂಗು ಕೇಳುತ್ತಿದೆ : ಪ್ರಧಾನಿ ಮೋದಿ


ಮುಂದುವರೆದು ಮತನಾಡಿದ ಅವರು, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದಲಿತರ ಉದ್ಧಾರ ಮಾಡುವ ಬದಲು ತಮ್ಮ ಪರಿವಾರದ ಉದ್ಧಾರ ಮಾಡಿಕೊಂಡಿದ್ದಾರೆ. ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮಲ್ಲಿಕಾರ್ಜುನ ಖರ್ಗೆ ಅವರ ಪರಿವಾರದವರ ಆಸ್ತಿ ಎಷ್ಟಿದೆ ಎಂದು ಯಾರಿಗಾದರೂ ಗೊತ್ತೇ ದನು ನರೇಂದ್ರ ಮೋದಿ ಪ್ರಶ್ನಿಸಿದರಲ್ಲದೆ, ದಲಿತರನ್ನು ಉದ್ಧಾರ ಮಾಡುವ ಬದಲು ಕಾಂಗ್ರೆಸ್ ನವರು ಸ್ವಂತ ಉದ್ಧಾರವನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ನರೇಂದ್ರ ಮೋದಿ ಆರೋಪಿಸಿದರು. 


ಸಿದ್ದರಾಮಯ್ಯ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ: ಪ್ರಧಾನಿ ಮೋದಿ


ತಮ್ಮ ಸ್ವ ಅಭಿವೃದ್ಧಿಗೆ ಗಮನ ಹರಿಸುವ ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಏನೂ ಪ್ರಯೋಜನವಿಲ್ಲ. ಹಾಗಾಗಿ ರಾಜ್ಯ-ದೇಶದ ಅಭಿವೃದ್ಧಿಯನ್ನೇ ಮೂಲಮಂತ್ರ ಮಾಡಿಕೊಂಡಿರುವ  ಬಿಜೆಪಿಗೆ ಮತ ಹಾಕಿ ಎಂದು ನರೇಂದ್ರ ಮೋದಿ ಜನತೆಗೆ ಕರೆ ನೀಡಿದರು.