ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಬಹುಮತವಿಲ್ಲದಿದ್ದರೂ ಸಹಿತ ಸರ್ಕಾರ ರಚಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.


COMMERCIAL BREAK
SCROLL TO CONTINUE READING

ಬುಧವಾರದಂದು ರಾಜ್ಯಪಾಲ ವಾಜುಬಾಯಿ ರೂಡಾವಾಲಾ ಅವರು ಬಿಜೆಪಿಯ ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಈಗ ಈ ನಿರ್ಧಾರವನ್ನು ಪ್ರಶ್ನಿಸಿರುವ ವಕೀಲ ಎನ್.ಪಿ.ಅಮೃತೇಶ್ ಅವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅವರು ಅರ್ಜಿಯಲ್ಲಿ ಯಡಿಯೂರಪ್ಪನವರಿಗೆ  ಆಹ್ವಾನ ನೀಡಿದ್ದು ಸಂವಿಧಾನ ಬಾಹಿರ ಎಂದು ಘೋಷಿಸಬೇಕು, ಅಲ್ಲದೆ ಶಾಸಕರ ಪಕ್ಷಾಂತರಕ್ಕೆ ನಿರ್ಬಂಧ ಹೇರಬೇಕು  ಎಂದು ತಿಳಿಸಿದ್ದಾರೆ.


ರಾಜ್ಯಪಾಲರ ಕ್ರಮವು ಸಂವಿಧಾನದ 10 ನೇ ಪರಿಚ್ಛೇದ ಉಲ್ಲಂಘನೆಯಾಗಿದೆ.ಈ ಸಂದರ್ಭದಲ್ಲಿ ಶಾಸಕರು ಅಡ್ಡ ಮತದಾನ ಮಾಡುವ  ಮತ್ತು  ಅಥವಾ ಶಾಸಕರನ್ನು ರಾಜೀನಾಮೆ ಕೊಡಿಸುವ ಯತ್ನಕ್ಕೆ ತಡೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷವು ಪ್ರಮಾಣ ವಚನ ಸ್ವೀಕಾರ ಕ್ರಮವನ್ನು ಮುಂದೂಡಬೇಕು ಎಂದು ಅರ್ಜಿ ಸಲ್ಲಿಸಿತ್ತು ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ತೀರಸ್ಕರಿಸಿತ್ತು.