ಬೆಂಗಳೂರು: ರಾಜ್ಯ ವಿಧಾನಸಭೆ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯ ಚುನಾವಣಾ ಕಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಬ್ಬರ ಪ್ರಾರಂಭವಾಗಲಿದೆ. ಮೇ 1ರಿಂದ ರಾಜ್ಯದಲ್ಲಿ ಮೋದಿ 'ಹವಾ' ಮತ್ತೆ ತನ್ನ ಪ್ರಭಾವ ಬೀರಲಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಮಲ ನಾಯಕರ ಪರ ಪ್ರಚಾರ ಮಾಡಲು ಮೇ. 1ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಹವಾ ಬಳಸಿಕೊಂಡು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜುಗೊಂಡಿರುವ ಕಮಲ ಪಡೆ,  ಕರ್ನಾಟಕದಲ್ಲಿ ತನ್ನ ವಿಜಯದೊಂದಿಗೆ 'ಕಾಂಗ್ರೆಸ್ ಮುಕ್ತ ಕರ್ನಾಟಕ'ದ ಉದ್ದೇಶ ಹೊಂದಿದೆ.  ಒಟ್ಟು ಐದು ದಿನ ಒಟ್ಟು ಹದಿನೈದು ಸಾರ್ವಜನಿಕ ಸಭೆಗಳಲ್ಲಿ ಮೋದಿ ಭಾಗವಹಿಸಲಿದ್ದು,  ಬೆಂಗಳೂರಿನಲ್ಲಿ ಎರಡು ಬೃಹತ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ.


ಪ್ರಧಾನಿ ಮೋದಿ ರಾಜ್ಯ ಪ್ರವಾಸದ ವೇಳಾಪಟ್ಟಿ;
* ಮೇ 1


  • ಬೆಳಿಗ್ಗೆ 11:00ಕ್ಕೆ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ

  • ಮಧ್ಯಾಹ್ನ 03:00ಕ್ಕೆ ಉಡುಪಿಯ ಎಂಜಿಎಂ ಕಾಲೇಜು ಮೈದಾನ

  • ಸಂಜೆ 06:00ಕ್ಕೆ ಬೆಳಗಾವಿಯ ಚಿಕ್ಕೋಡಿ


* ಮೇ 3


  • ಬೆಳಿಗ್ಗೆ 11:00ಕ್ಕೆ ಗುಲ್ಬರ್ಗ

  • ಮಧ್ಯಾಹ್ನ 03:00ಕ್ಕೆ ಬಳ್ಳಾರಿ

  • ಸಂಜೆ 06:00ಕ್ಕೆ ಬೆಂಗಳೂರು


* ಮೇ ೦5


  • ಬೆಳಿಗ್ಗೆ 11:00ಕ್ಕೆ ತುಮಕೂರು

  • ಮಧ್ಯಾಹ್ನ 03:00ಕ್ಕೆ ಶಿವಮೊಗ್ಗ 

  • ಸಂಜೆ 06:00ಕ್ಕೆ ಹುಬ್ಬಳ್ಳಿ


* ಮೇ ೦7  


  • ಬೆಳಿಗ್ಗೆ 11:00ಕ್ಕೆ ರಾಯಚೂರು 

  • ಮಧ್ಯಾಹ್ನ 03:00ಕ್ಕೆ ಚಿತ್ರದುರ್ಗ   

  • ಸಂಜೆ 06:00ಕ್ಕೆ ಕೋಲಾರ


* ಮೇ ೦8 


  • ಬೆಳಿಗ್ಗೆ 11:00ಕ್ಕೆ ವಿಜಯಪುರ

  • ಮಧ್ಯಾಹ್ನ 03:00ಕ್ಕೆ ಮಂಗಳೂರು

  • ಸಂಜೆ 06:00ಕ್ಕೆ ಬೆಂಗಳೂರು