ದೇವೇಗೌಡರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ!
ಬೆಂಗಳೂರು: ಅಂತಿಮ ಹಂತದ ಚುನಾವಣಾ ಪ್ರಚಾರವನ್ನು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯಲ್ಲಿ ಭಾಷಣ ಮಾಡುತ್ತಾ ಮಾಜಿ ದೇವೇಗೌಡರನ್ನು ಕೊಂಡಾಡಿದರು.
ಭಾಷಣದ ವೇಳೆ ಪ್ರಸ್ತಾಪಿಸಿದ ಅವರು "ದೇವೇಗೌಡರ ದೆಹಲಿಗೆ ಬಂದಾಗಲೆಲ್ಲಾ ಭೇಟಿಯಾಗುತ್ತಿದ್ದೆ,ನಾನು ಖುದ್ದು ತೆರಳಿ ಅವರನ್ನು ಸ್ವಾಗತಿಸುತ್ತಿದ್ದೆ, ವಾಪಸ್ ಹೋಗುವಾಗಲು ಕೂಡ ಅವರ ಕಾರಿನ ಬಳಿ ತೆರಳಿ ಅವರನ್ನು ಬಿಳ್ಕೊಡುತ್ತಿದ್ದೆ. ಆದರೆ ಕಾಂಗ್ರೆಸ್ ನವರು ಚುನಾವಣಾ ವೇಳೆ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಆ ಮೂಲಕ ಕರ್ನಾಟಕ ಚುನಾವಣೆಯ ನಂತರ ಒಂದು ವೇಳೆ ಯಾವುದೇ ಪಕ್ಷ ಬಹುಮತ ಬರದೆ ಇದ್ದರೆ ಪ್ರಧಾನಿ ಮೋದಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಲೆಕ್ಕಾಚಾರವನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂದಿನ ಚುನಾವಣಾ ಪರ್ಚಾರದ ಭಾಷಣದ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳುವ ಮೂಲಕ ಅವರ ಗಮನ ಸೆಳೆಯುವ ಯತ್ನ ಮಾಡಿದ್ದಾರೆ ಎನ್ನಲಾಗಿದೆ.