ಬೆಂಗಳೂರು: ರಮ್ಯಾ ಈಗ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮಿಡಿಯಾ ವಿಭಾಗವನ್ನು ಪರಿಣಾಮಕಾರಿಯಾಗಿ ಉಪಯೋಗಿಸುತ್ತಿರುವುದರ ಮೂಲಕ ಬಿಜೆಪಿ ಕೌಂಟರ್ ಕೊಡುತ್ತಿದ್ದಾರೆ.ಈ ಕಾರಣದಿಂದಲೇ ಈಗ ಅವರು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಆದರೆ ಈಗ ನಾವು ಹೇಳುತ್ತಿರುವ ಅಸಲಿ ಸಂಗತಿ ಏನೆಂದರೆ ರಮ್ಯಾ ಈಗ ತವರು ನೆಲದಲ್ಲಿ ಮತ ಹಾಕದೆ ಬಹಳ ಸುದ್ದಿ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಮತದಾನದ ಸಂದರ್ಭದಲ್ಲಿ ಪ್ರಮುಖ ವ್ಯಕ್ತಿಗಳು ಮತ ಚಲಾಯಿಸುವ ಮೂಲಕ ಮಾಧ್ಯಮಗಳಿಗೆ ಫೋಟೋ ಪೋಸ್ ನೀಡುತ್ತಾ ಸುದ್ದಿ ಮಾಡುವುದು ಸಾಮಾನ್ಯ ಸಂಗತಿ. ಆದರೆ ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿರುವ ರಮ್ಯ ಈ ಬಾರಿಯ ಪ್ರತಿಷ್ಟಿತ ರಾಜ್ಯ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದಿರುವುದು ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ 


ಮಂಡ್ಯ ಕ್ಷೇತ್ರದ ಮಾಜಿ ಸಂಸದೆಯಾಗಿದ್ದ ರಮ್ಯ ನಗರಲ್ಲಿನ ವಿಧ್ಯಾನಗರದ 10 ವಾರ್ಡ್ ನಲ್ಲಿ ಅವರ ಹೆಸರು ನೊಂದಣಿಯಾಗಿದೆ. ಆದರೆ ಅವರು ಮತದಾನದಂದು ಗೈರು ಹಾಜರಾಗುವ ಮೂಲಕ ಸ್ಥಳಿಯರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.