ತುಮಕೂರು: ನಡೆದಾಡುವ ದೇವರು ಎಂದೇ ಖ್ಯಾತರಾದ ಶ್ರೀ ಸಿದ್ದಗಂಗಾ ಮಠದ ಶತಾಯುಶಿ ಡಾ. ಶಿವಕುಮಾರ ಸ್ವಾಮೀಜಿ ಅವರು ಇಂದು ಶ್ರೀ ಮಠದ ಆವರಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.


COMMERCIAL BREAK
SCROLL TO CONTINUE READING

ರಾಜ್ಯದ ಅತ್ಯಂತ ಹಿರಿಯ ಮತದಾರರಾಗಿರುವ 111 ವರ್ಷದ ಶ್ರೀಗಳು ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮಠ ಆವರಣದಲ್ಲಿರುವ ಶಾಲೆಯ ಮತಗಟ್ಟೆ ಸಂಖ್ಯೆ 113ರಲ್ಲಿ ಮತ ಚಲಾಯಿಸಿದರು. 1951ರಲ್ಲಿ ದೇಶದ ಮೊದಲ ಲೋಕಸಭಾ ಚುನಾವಣೆಯಲ್ಲಿ ಮತಚಲಾಯಿಸಲು ಆರಂಭಿಸದ ಶ್ರೀಗಳು ಇದುವರೆಗೂ ನಡೆದ 15 ಲೋಕಸಭೆ ಮತ್ತು 13 ವಿಧಾನಸಭೆ ಚುನಾವಣೆಗಳಲ್ಲಿ ತಪ್ಪದೆ ಮತಚಲಾಯಿಸಿದ್ದಾರೆ.